ಪರಪ್ಪನ ಅಗ್ರಹಾರಲ್ಲಿ ಮತ್ತೆ ಇಬ್ಬರು ಅಮಾನತು

two more suspended
two more suspended
Published on

ಪ್ರಮುಖ ಮುಖ್ಯಾಂಶಗಳು

  • ಪ್ರಜ್ವಲ್ ಬ್ಯಾರಕ್‌ಗೆ ಮೊಬೈಲ್ ತಲುಪಿಸಿದ್ದವನ ಬಂಧನ

ಬೆಂಗಳೂರು:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ, ಅತ್ಯಾಚಾರ ಕೈದಿ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಪತ್ತೆಯಾಗಿದ್ದ ಮೊಬೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಜೈಲು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಜೈಲರ್ ರಮೇಶ್ ಧರ್ಮಟ್ಟಿ, ವಾರ್ಡರ್ ಮಹೇಶ್ ಸಜ್ಜನ್ ಅಮಾನತುಗೊಂಡವರು. ಸಿಸಿಬಿ ಅಧಿಕಾರಿಗಳು ಇತ್ತೀಚೆಗೆ ಜೈಲಿನ ಹೈಸೆಕ್ಯೂರಿಟಿ ಸೆಲ್ ಮೇಲೆ ದಾಳಿ ನಡೆಸಿದ ವೇಳೆ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಸೇರಿ ಇತರೆ ವಸ್ತುಗಳು ಪತ್ತೆಯಾಗಿದ್ದವು. ಜೈಲಿನ ಒಳಗೆ ಮತ್ತೊ ಹೊರಗೆ ವ್ಯಾಪಕ ಭದ್ರತೆ ಕಲ್ಪಿಸಲಾಗಿದ್ದರು ಕೈದಿಗಳಿಗೆ ಅಂಡ್ರಾಯಿಡ್ ಮೊಬೈಲ್ ಪೂರೈಕೆ ಮಾಡಲಾಗಿತ್ತು.
ನಿಷೇಧಿತ ವಸ್ತುಗಳು ಜೈಲಿನ ಒಳಗೆ ಸಾಗಣೆ ಮಾಡಿರುವ ಕುರಿತು ಸಿಸಿಬಿ ಅಧಿಕಾರಿಗಳು ಹಾಗೂ ಕಾರಾಗೃಹ ಮತ್ತು ಜೈಲು ಸುಧಾರಣೆ ಸೇವೆಗಳ ಇಲಾಖೆ ಅಧಿಕಾರಿಗಳು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎ್ಆರ್ ದಾಖಲಿಸಿದ್ದರು. ಅಲ್ಲದೇ ಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ಹಾಗೂ ಸೂಚನೆ ಮೇರೆಗೆ ಜೈಲಿನ ಸಹಾಯಕ ಅಧೀಕ್ಷಕರೊಬ್ಬರನ್ನು ಅಮಾನತು ಮಾಡಲಾಗಿತ್ತು.
ಎರಡು ತಂಡಗಳಿಂದ ತನಿಖೆ:
ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವ ಕುರಿತು ಡಿಜಿಪಿ ಅಲೋಕ್ ಕುಮಾರ್ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ಸಮಿತಿ ರಚನೆಗೊಳಿಸಿ ತನಿಖೆಗೆ ಆದೇಶಿಸಿದ್ದರು. ತನಿಖೆ ಕೈಗೊಂಡ ಅಧಿಕಾರಿಗಳು ಜೈಲಿನಲ್ಲಿರುವ ವಿವಿಧ ಹೈಸೆಕ್ಯೂರಿಟಿ ಬ್ಯಾರಕ್ ಪರಿಶೀಲನೆ ನಡೆಸಿದೆ. ಅಲ್ಲದೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದ ಎ್ಐಆರ್‌ಗಳ ಅನ್ವಯ ಪೊಲೀಸರು ತನಿಖೆ ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್‌ಗೆ ಮೊಬೈಲ್ ಸಾಗಣೆ ಮಾಡಿರುವ ಸಂದರ್ಭದಲ್ಲಿ ಅಧಿಕಾರಿಗಳ ಇಬ್ಬರು ಅಧಿಕಾರಿಗಳ ಕರ್ತವ್ಯಲೋಪ ಸಾಬೀತಾಗಿರುವ ಪರಿಣಾಮ ಇಬ್ಬರನ್ನು ಅಮಾನತು ಮಾಡಲಾಗಿದೆ.

ಸ್ನೇಹಿತನಿಗೆ ಮೊಬೈಲ್ ನೀಡಿದ್ದವ ಬಂಧನ

ಪರಪ್ಪನ ಅಗ್ರಹಾರದಲ್ಲಿರುವ ಕೈದಿ ಪ್ರಜ್ವಲ್ ರೇವಣ್ಣ ಸ್ನೇಹಿತನ ಮೂಲಕ ಮೊಬೈಲ್ ಪೂರೈಕೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿಯ ನವೀನ್ ಬಂಧಿತ. ಪೊಲೀಸರ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ನವೀನ್ ಪ್ರಜ್ವಲ್‌ಗೆ ಮೊಬೈಲ್ ನೀಡಿಲ್ಲ, ಬದಲಾಗಿ ಪ್ರಜ್ವಲ್ ಸ್ನೇಹಿತನಿಗೆ ಮೊಬೈಲ್ ನೀಡಿದ್ದಾನೆ. ಆತನು ಕೆಲ ದಿನಗಳ ಹಿಂದೆ ಜೈಲಿಗೆ ಹೋಗಿದ್ದ. ರೇವಣ್ಣನ ಬ್ಯಾರಕ್‌ನಲ್ಲಿದ್ದ ವಿಚಾರಣಾಧೀನ ಆರೋಪಿ ಪ್ರತಾಪ್ ರಾಯ್‌ಗೆ ಮೊಬೈಲ್ ನೀಡಿದ್ದಾನೆ. ಆತನು ಪ್ರಜ್ವಲ್ ರೇವಣ್ಣನಿಗೆ ತಲುಪಿಸಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net