ಗಾಂಜಾ ಮಾರಾಟಗಾರರಿಬ್ಬರ ಬಂಧನ / VIJAYAPUR

ವಿಜಯಪುರ ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿರುವ ಗಾಂಜಾ ಮತ್ತು ದ್ವಿಚಕ್ರ ವಾಹನ.
ವಿಜಯಪುರ ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿರುವ ಗಾಂಜಾ ಮತ್ತು ದ್ವಿಚಕ್ರ ವಾಹನ.
Published on
ವಿಜಯಪುರ: ಸಮೀಪದ ರಾಷ್ಟ್ರೀಯ ಹೆದ್ದಾರಿ 44ರ ಬುಳ್ಳಹಳ್ಳಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಮಂಗಳವಾರ ದ್ವಿಚಕ್ರ ವಾಹನ ನಿಲ್ಲಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಜಯಪುರ ಸಮೀಪದ ಆವತಿ ಗ್ರಾಮದ ಬಾಲಾಜಿ (23) ಹಾಗೂ ಬಾಲರಾಜ್​ (53) ಬಂಧಿತರು. ಬಂಧಿತರಿಂದ 650 ಗ್ರಾಂ ತೂಕದ ಹಸಿ ಮತ್ತು ಒಣ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ವಿಜಯಪುರ ಠಾಣೆ ವೃತ್ತ ನಿರೀಕ್ಷಕ ಲಕ್ಷಿ$್ಮನಾರಾಯಣ್​ ನೇತೃತ್ವದಲ್ಲಿ ಪಿಎಸ್​ಐ ಸುನಿಲ್​ಕುಮಾರ್​, ಸಿಬ್ಬಂದಿ ಮಹ್ಮದ್​ ಮುಕ್ತಿಯಾರ್​, ರಾಮಾಂಜಿ, ಅಶ್ವತ್ಥರೆಡ್ಡಿ, ಪ್ರವಿಣ್​, ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net