ಚೇಳೂರಿನ ನಿವಾಸಿಗಳಾದ ನರಸಿಂಹಪ್ಪ (45) ಮತ್ತು ನಾರಾಯಣಸ್ವಾಮಿ (44) ಮೃತರು. ಚಾಲಕ ಸ್ನೇಹಿತನನ್ನು ಮಾತನಾಡಿಸುವ ಸಲುವಾಗಿ ಇಬ್ಬರು ಬೈಕಿನಲ್ಲಿ ಪೆರೇಸಂದ್ರ ಕಡೆಗೆ ಬರುತ್ತಿದ್ದ ವೇಳೆ ಬಾಗೇಪಲ್ಲಿಯಿಂದ ಬೆಂಗಳೂರಿಗೆ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೆರೇಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.