ಅಂತಾರಾಜ್ಯ ಬೈಕ್​ ಕಳ್ಳರಿಬ್ಬರ ಸೆರೆ / HOSAKOTE

ಹೊಸಕೋಟೆ ಠಾಣೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಎಂ.ವಿ.ಚಂದ್ರಕಾಂತ, ಹೊಸಕೋಟೆ ವಿಭಾಗದ ಪೊಲೀಸ್​ ಡಿವೈಎಸ್​ಪಿ ಮಲ್ಲೇಶ್​, ಆರಕ್ಷಕ ನಿರೀಕ್ಷಕ ಗೋವಿಂದ್​, ಪಿಎಸ್​ಐ ಮುನಿರಾಜ್​, ಸಿಬ್ಬಂದಿ ಗೋಪಾಲ ಕೃಷ್ಣ ಇತರರು ಇದ್ದರು.
ಹೊಸಕೋಟೆ ಠಾಣೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಎಂ.ವಿ.ಚಂದ್ರಕಾಂತ, ಹೊಸಕೋಟೆ ವಿಭಾಗದ ಪೊಲೀಸ್​ ಡಿವೈಎಸ್​ಪಿ ಮಲ್ಲೇಶ್​, ಆರಕ್ಷಕ ನಿರೀಕ್ಷಕ ಗೋವಿಂದ್​, ಪಿಎಸ್​ಐ ಮುನಿರಾಜ್​, ಸಿಬ್ಬಂದಿ ಗೋಪಾಲ ಕೃಷ್ಣ ಇತರರು ಇದ್ದರು.
Published on
ಹೊಸಕೋಟೆ : ಮೋಜು ಮಸ್ತಿಗಾಗಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು, < 55 ಲಕ್ಷ ಮೌಲ್ಯದ 50 ವಿವಿಧ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆ ಮಾಲೂರಿನ ಕೆ.ನರಸಿಂಹಮೂರ್ತಿ (46), ಆತನ ಸ್ನೇಹಿತ ಪ್ರಸಾದ್​ (32) ಬಂಧಿತರು. ಕಾಡುಗೋಡಿಯ ುಡ್​ ಕಾಪೋರ್ರೇಷನ್​ ಆ್​ ಇಂಡಿಯಾ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿ ಹಣದ ಅವಶ್ಯಕತೆ ಇದ್ದಾಗ ದ್ವಿಚಕ್ರವಾಹನ ಕದ್ದು ಆಂಧ್ರಪ್ರದೇಶದಲ್ಲಿರುವ ತನ್ನ ಸ್ನೇಹಿತ ಪ್ರಸಾದ್​ಗೆ ನೀಡುತ್ತಿದ್ದ. ಕದ್ದ ಬೈಕ್​ಗಳನ್ನು ಮಾರಾಟ ಮಾಡಿ ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಆರೋಪಿ ನರಸಿಂಹಮೂರ್ತಿ ಕೆಲ ವರ್ಷಗಳ ಹಿಂದೆ ಆಂಧ್ರದ ನಲ್ಲೂರಿನ ಬಳಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಸ್ನೇಹಿತನಾಗಿದ್ದ ಪ್ರಸಾದ್​ ಕದ್ದ ಬೈಕ್​ಗಳನ್ನು ಸ್ಥಳಿಯ ಗ್ರಾಮಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿಸಿಕೊಡುವಲ್ಲಿ ಸಹಕಾರ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಹೊಸಕೋಟೆ ವಿಭಾಗದ ಡಿವೈಎಸ್​ಪಿ ಮಲ್ಲೇಶ್​ ಅವರ ಮಾರ್ಗದರ್ಶನದಲ್ಲಿ ಆರಕ್ಷಕ ನಿರೀಕ್ಷಕ ಗೋವಿಂದ್​ ನೇತೃತ್ವದಲ್ಲಿ ಪಿಎಸ್​ಐ ಮುನಿರಾಜ್​, ಸಿಬ್ಬಂದಿ ಗೋಪಾಲ ಕೃಷ್ಣ, ಜಗನ್ನಾಥ, ಅಪ್ರೋಜ್​, ದತ್ತಾತ್ರೇಯ, ರಮೇಶ್​, ಬಸವರಾಜ ಬಕಾಲಿ, ಸತೀಶ್​, ನಾರಾಯಣ, ಅಂಬರೀಶ ಕಾರ್ಯಾಚರಣೆ ನಡೆಸಿದ್ದರು.
ಚಿನ್ನಾಭರಣ ಕಳವು : ಈ ಹಿಂದೆ ನಲ್ಲೂರಿನ ಬಳಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ಈ ಇಬ್ಬರೂ ಆರೋಪಿಗಳು ಕೈಚಳಕ ತೋರಿ ಸಿಕ್ಕಿ ಬಿದ್ದಿದ್ದು, ಆಂಧ್ರಪ್ರದೇಶದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೊಸಕೋಟೆಯಲ್ಲಿ ಬೈಕ್​ ಕಳವು : ಹೊಸಕೋಟೆ ಬಸ್​ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್​ ಕಳವಾಗಿರುವ ಬಗ್ಗೆ ದೂರು ಬಂದ ಕೂಡಲೇ ಕಾರ್ಯಾಚರಣೆ ನಡೆಸಿದ ಹೊಸಕೋಟೆ ಪೊಲೀಸರು, ಕೆಲವೇ ಗಂಟೆಗಳಲ್ಲಿ ಬೈಕ್​ ಹಾಗೂ ಕಳವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯದ ಇಂಚಿಂಚೂ ಬಾಯ್ಬಿಟ್ಟಿದ್ದಾನೆ. ನಂತರ ಪೊಲೀಸರು ನಲ್ಲೂರಿನ ಪ್ರಸಾದ್​ ಹಾಗೂ ಕದ್ದ 50 ಬೈಕ್​ಗಳ ಮಾಹಿತಿ ಪಡೆದು ವಶಕ್ಕೆ ಪಡೆದರು.
ವಿವಿಧ ಠಾಣೆಯಲ್ಲಿ ದೂರು ದಾಖಲು : ದ್ವಿಚಕ್ರ ವಾಹನ ಕದ್ದು ಸಿಕ್ಕಿಬಿದ್ದ ನರಸಿಂಹಮೂರ್ತಿ ವಿರುದ್ಧ ಹೊಸಕೋಟೆ ಠಾಣೆಯಲ್ಲಿ 5, ಮಾಲೂರಿನಲ್ಲಿ 18, ಬಂಗಾರಪೇಟೆಯಲ್ಲಿ 6, ಕಾಡುಗೋಡಿಯಲ್ಲಿ 5, ಕೋಲಾರ ನಗರದಲ್ಲಿ 1, ಬೇತಮಂಗಲದಲ್ಲಿ 1, ಕಾಟನ್​ಪೇಟೆ ಠಾಣೆಯಲ್ಲಿ 1 ಹಾಗೂ ಇತರ ಠಾಣೆಯಲ್ಲಿ 12 ಪ್ರಕರಣಗಳು ದಾಖಲಾಗಿವೆ.
ಮಾಲೀಕರಿಗೆ ವಾಪಸ್​ : ರಾಜ್ಯದ ವಿವಿಧ ಜಿಲ್ಲೆಗಳ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿರುವ ವರದಿ ಬಂದಿದ್ದು, ಬೈಕ್​ ಕಳೆದುಕೊಂಡವರಿಗೆ ಆಯಾ ಠಾಣೆ ಅಧಿಕಾರಿಗಳ ಮೂಲಕ ವಾಹನಗಳನ್ನು ಮರಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂ.ಗ್ರಾಮಾಂತರ ಜಿಲ್ಲಾ ಪೊಲೀಸ್​ ಅಧೀಕ್ಷಕ ಎಂ.ವಿ.ಚಂದ್ರಕಾಂತ ತಿಳಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ಶ್ಲಾನೆ : ಹೊಸಕೋಟೆ ಪೊಲೀಸರ ಕಾರ್ಯಾಚರಣೆಗೆ ಶ್ಲಾನೆ ವ್ಯಕ್ತಪಡಿಸಿರುವ ಜಿಲ್ಲಾ ಪೊಲೀಸ್​ ಅಧೀಕ್ಷಕ ಎಂ.ವಿ.ಚಂದ್ರಕಾಂತ ಅವರು ಮುಂದಿನ ಜಿಲ್ಲಾ ಪೊಲೀಸ್​ ಪರೇಡ್​ನಲ್ಲಿ ಹೊಸಕೋಟೆ ಪೊಲೀಸರಿಗೆ ಪ್ರಶಂಸಾ ಪತ್ರ ಹಾಗೂ ಬಹುಮಾನ ನೀಡುವುದಾಗಿ ಘೋಷಿಸಿದರು.
ಬ್ರಹ್ಮರಥೋತ್ಸವ ನಿರ್ವಹಣೆಗೆ ಮೆಚ್ಚುಗೆ : ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಶ್ರೀ ದ್ರೌಪದಾಂಬಾ ದೇವಿ ಕರಗ ಮಹೋತ್ಸವದಲ್ಲಿ ಪೊಲೀಸ್​ ಇಲಾಖೆ ನಿರ್ವಹಿಸಿದ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ರಥೋತ್ಸವದಲ್ಲಿ ಸರಗಳವು, ದ್ವಿಚಕ್ರವಾಹನ ಕಳವು, ದೊಂಬಿ, ಗಲಾಟೆ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಈ ಬಾರಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದಕ್ಕೆ ಡಿವೈಎಸ್​ಪಿ ಮಲ್ಲೇಶ್​ ಅವರ ಕಾರ್ಯತಂತ್ರ ಕಾರಣವಾಗಿದೆ. ಈ ಬಾರಿ ನೂತನ ರಥದಲ್ಲಿ ಮೆರವಣೆಗೆ ಮಾಡುವುದರಿಂದ ಸಮಸ್ಯೆ ರಹಿತ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ಅಗತ್ಯವಿದೆ ಎಂದಿದ್ದರು. ಅದರಂತೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವುದಕ್ಕೆ ಶಾಸಕ ಶರತ್​ ಬಚ್ಚೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್​ ಅಧೀಕ್ಷಕ ಎಂ.ವಿ.ಚಂದ್ರಕಾಂತ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net