ಎರಡು ದಿನ ಸಂಗೀತ ಸಮ್ಮೇಳನ ಆಯೋಜನೆ

CHINNAYYA SWAMY
CHINNAYYA SWAMY
Published on
ರಾಯಚುರು ಡಾ.ಪಂ. ಪುಟ್ಟರಾಜ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಡಾ.ಪಂ ಪುಟ್ಟರಾಜ ಕವಿ ಗವಾಯಿಗಳ
15ನೇಯ ಪುಣ್ಯಸ್ಮರಣೆಯ ನಿಮಿತ್ತ ಡಿ.13 ಮತ್ತು 14 ರಂದು ನಗರದ ಸೋಮವಾರ ಪೇಟೆ ಹಿರೇಮಠದಲ್ಲಿ ರಾಷ್ಟ್ರಯ ಹಾಗೂ ಅಂತರರಾಷ್ಟ್ರೀಯ ಕಲಾವಿದರಿಂದ ಸಂಗೀತ ಸಮ್ಮೇಳನ ಆಯೋಜನೆ ಮಾಡಲಾಗಿದೆಂದು ಟ್ರಸ್ಟ್ ನ ಖಜಾಂಚಿ ಪಿ.ಚಿನ್ನಯ್ಯ ಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕಿಲ್ಲೆ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ, ಮಂಗಳವಾರಪೇಟೆಯ ವೀರ ಸಂಗಮೇಶ್ವರ ಮಹಾಸ್ವಾಮಿಗಳು ನೇರವೇರಿಸಲಿದ್ದಾರೆ.ಅತಿಥಿಗಳಾಗಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಬಸನಗೌಡ ದದ್ದಲ್, ಸಂಸದ ಜಿ. ಕುಮಾರ ನಾಯಕ, ಬಸವರಾಜ ಪಾಟೀಲ್ ಇಟಿಗಿ, ಎನ್.ಗಿರಿಜಾ ಶಂಕರ, ಶ್ರೀ ನಿವಾಸ್ ರೆಡ್ಡಿ, ಪಿ. ವೆಂಕಟೇಶರೆಡ್ಡಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರಮುಖರಾದ ಈರಣ್ಣ ಹೂಗಾರ ಜಾಲಿಬೆಂಚಿ, ಚೇತನ್ ಕುಮಾರ, ಅಯ್ಯಪ್ಪ ಸ್ವಾಮಿ,ಎನ್.ಎಸ್.ರಘುಕುಮಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net