ಮುಳಬಾಗಿಲು: ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಗೋ ಶಾಲೆಯಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ಶಾಟ್ ನಿಂದ ಎರಡು ದೇಸಿ ಹಸುಗಳು ಮೃತಪಟ್ಟ ಟನೆ ನಡೆದಿದೆ.
ದೇವಾಲಯ ಆಡಳಿತ ಮಂಡಳಿಯ ಉಸ್ತುವಾರಿ ಹಾಗೂ ಸಿಬ್ಬಂದಿಯ ರ್ನಿಲಕ್ಷದಿಂದ ಗೋವುಗಳು ಮೃತಪಟ್ಟಿವೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ದೇವಾಲಯ ಆಡಳಿತ ಮಂಡಳಿ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಕೆ.ವಿ.ಸುಬ್ರಮಣ್ಯಂ ಅವರನ್ನು ಬದಲಾವಣೆ ಮಾಡಿದ ನಂತರ ದೇವಾಲಯದ ಆಡಳಿತ ವ್ಯವಸ್ಥೆ ದಾರಿ ತಪ್ಪಿದೆ. ಈ ಕುರಿತು ದೇವಾಲಯ ಆಡಳಿತ ಮಂಡಳಿ, ಜಿಲ್ಲಾ, ತಾಲೂಕು ಆಡಳಿತ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.