

ಚಿಂತಾಮಣಿ: ತಾಲೂಕಿನ ಬನಹಳ್ಳಿ ಕೆರೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕೈವಾರದ ಅಂಬೇಡ್ಕರ್ ನಗರದ ಅಕ್ಷಯ್ (26) ಮತ್ತು ಪವನ್ (22) ಬಂಧಿತರು.
ಚಿಂತಾಮಣಿ ಗ್ರಾಮಾಂತರ ಠಾಣೆ ಎಎಸ್ಐ ದಿನೇಶ್ ಮತ್ತು ಎಚ್.ಸಿ ನಾಗರಾಜ್ ಗಸ್ತು ತಿರುಗುತ್ತಿದ್ದ ವೇಳೆ ಬನಹಳ್ಳಿ ಕೆರೆ ಬಳಿ ಇಬ್ಬರು ಮಾದಕ ವಸ್ತು ಸೇವಿಸಿ ಮತ್ತಿನಲ್ಲಿ ತೇಲಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಕ್ಯಾಲನೂರಿಗೆ ಹೋಗಿದ್ದಾಗ ಅಪರಿಚಿತ ವ್ಯಕ್ತಿ ಮೈಕೈ ನೋವಿಗೆ ಗಿಡಮೂಲಿಕೆ ಎಂದು 200 ರೂಪಾಯಿಗೆ ಪಾಕೆಟ್ ನೀಡಿದ್ದು, ಆ ಪಾಕೆಟ್ ಗಾಂಜಾ ಎಂದು ತಿಳಿದ ನಂತರ ಕೈವಾರಕ್ಕೆ ಬಂದು ಸ್ನೇಹಿತ ಪವನ್ನನ್ನು ಕರೆದು ಕೆರೆ ಬಳಿ ಹೋಗಿ ಇಬ್ಬರೂ ಸಿಗರೇಟ್ನಲ್ಲಿ ಗಾಂಜಾ ಸೇವಿಸಿರುವುದಾಗಿ ವಿಚಾರಣೆ ವೇಳೆ ಅಕ್ಷಯ್ ಒಪ್ಪಿಕೊಂಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.