

: ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ 4ನೇ ತರಗತಿ ವಿದ್ಯಾರ್ಥಿಗಳಾದ ಆರ್ ಮಲ್ಲೇಶ್ ಹಾಗೂ ಆರ್. ಮಾದೇಶ್ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕರ್ನಾಟಕ ಟೆಕ್ವಾಂಡೋ ಸಬ್ ಜೂನಿಯರ್ ಚಾಂಪಿಯನ್‌ಶಿಪ್ 43ನೇ ಕರಾಟೆ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇಬ್ಬರೂ ಅಚ್ಚಲು ಗ್ರಾಮದ ರಘು ಮತ್ತು ಅನಿತಾ ದಂಪತಿಯ ಅವಳಿ ಪುತ್ರರು. ಮಾಸ್ಟರ್ ಗೋವಿಂದು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.