ತಂಬಾಕು ಸೇವನೆಯಿಂದ ದೂರವಿರಿ

ಕೆಎಲ್ಇ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ
ಕೆಎಲ್ಇ ಸಂಸ್ಥೆಯಿಂದ ಜಾಗೃತಿ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ತಂಬಾಕು ಸೇವನೆಯಿಂದ ದೂರವಿರಿ
  • ಕೆಎಲ್ಇ ಚಾರಿಟಬಲ್ ಆಸ್ಪತ್ರೆ ವೈದ್ಯ ಕಂಬಾರ ಸಲಹೆ
  • ತಂಬಾಕು ಮುಕ್ತ ದಿನದ ಕಾರ್ಯಕ್ರಮ
ತುಂಬಾಕುದಿಂದ ದೂರವಿದ್ದು ನೆಮ್ಮದಿ ಜೀವನ ನಡೆಸಿ
|ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಕಿವಿ ಮಾತು | ವಿಶ್ವ ತುಂಬಾಕು ರಹಿತ ದಿನದ ಪ್ರಯುಕ್ತ ರ್ಯಾಲಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ತುಂಬಾಕು ಇದು ಅಲ್ಪವೇಳೆಗೆ ನಶೆನೀಡುವ ಪದಾರ್ಥವಾದರೂ,ಇದರಿಂದ ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕ, ಕೌಟುಂಬಿಕ ವಿಘಟನೆಗಳು ಸಾಮಾನ್ಯವಾಗಿವೆ.ಆದುದರಿಂದ ಕಾಲ ಗತಿಸುವ ಮುಂಚೆಯೇ ಜಾಗೃತರಾಗಿ ನೆಮ್ಮದಿಯ ಜೀವನ ನಡೆಸಿ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಕಿವಿ ಮಾತು ಹೇಳಿದರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್, ಕೆಎಲ್‌ಇ ಸೆಂಟಿನರಿ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸನ ಶಿಬಿರದಲ್ಲಿ ಬುಧವಾರ ನಡೆಯಿತು ವಿಶ್ವ ತುಂಬಾಕು ರಹಿತ ದಿನದ ಪ್ರಯುಕ್ತ ಆಯೋಜಿಸಿದ ಜಾಗೃತಿ ರ್ಯಾಲಿ ಅವರು ಉದ್ಘಾಟಿಸಿದರು.
ತುಂಬಾಕು ಸೇವನೆಯು ವಿಶ್ವದಾದ್ಯಂತ ಜನರ ಆರೋಗ್ಯವನ್ನು ಹಾಳುಮಾಡುತ್ತಿರುವ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಧೂಮಪಾನ, ಗುಟ್ಕಾ, ಪಾನ್ ಮಸಾಲಾ ಮತ್ತು ಇತರ ತುಂಬಾಕು ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್, ಹೃದಯ ಸಂಬಾಧಿ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳು ಸೇರಿದಂತೆ ಅನೇಕ ಜೀವಘಾತಕ ರೋಗಗಳು ಉಂಟಾಗುತ್ತವೆ.
ಕಾಲೇಜಿನ ಪ್ರಾಂಶುಪಾಲ ಡಾ.ವಿಕ್ರಾಂತ ನೇಸರಿ ಮಾತನಾಡಿ ಇಂದು ಯುವಜನರು ಫ್ಯಾಶನ್, ಗೀಳು ಎಂಬ ಗೊಂದಲಕ್ಕೆ ಸಿಲುಕಿ ತಂಬಾಕಿನ ಆಕರ್ಷಿತರಾಗುತ್ತಿದ್ದಾರೆ. ಇದು ನಮ್ಮ ದೇಶದ ಯುವಜನರನ್ನು ಒಳಗಿನಿಂದ ನಾಶಪಡಿಸುವ ವಿಷವಾಗಿದ್ದು ಅದರ ಬಗ್ಗೆ ಅರಿತು, ಅದರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿ ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಎಲ್ಲರ ಪಾತ್ರ ಅತ್ಯವಶ್ಯಕವಾಗಿದೆ ಎಂದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿ ನವೀನ್ ಎನ್ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಯುವಜನರು ತುಂಬಾಕು ಹಾಗೂ ಇತರ ವ್ಯಸನಕಾರಿ ಪದಾರ್ಥಗಳಿಂದ ದೂರವಿರಬೇಕು ಎಂದರು.
ಪಾಲಿಕೆ ಸದಸ್ಯ ರಾಜು ಭಾತಖಂಡೆ,ಗಿರೀಶ ಡೋಂಗಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net