ಸತ್ಯ, ಧರ್ಮದ ಮೌಲ್ಯ ಸಾರಿದ ಮಹಾಪುರುಷ religion

ಸತ್ಯ, ಧರ್ಮದ ಮೌಲ್ಯ ಸಾರಿದ ಮಹಾಪುರುಷ religion
ಸತ್ಯ, ಧರ್ಮದ ಮೌಲ್ಯ ಸಾರಿದ ಮಹಾಪುರುಷ religion
Published on
ಮಾಲೂರು: ಮಾನವೀಯತೆ, ಸಮಾನತೆ, ಸತ್ಯ ಮತ್ತು ಧರ್ಮದ ಮೌಲ್ಯಗಳನ್ನು ಸಾರಿದ ಮಹಾನ್​ ಪುರುಷ ಬಸವಣ್ಣ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. religion
ನಗರದ ತಹಸೀಲ್ದಾರ್​ ಸಭಾಭವನದಲ್ಲಿ ಸೋಮವಾರ ತಾಲೂಕು ಆಡಳಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, ಬಸವಣ್ಣ ವಚನಗಳ ಮೂಲಕ ಸಮಾಜದಲ್ಲಿ ಮೇಲು-&ಕೀಳು ಎಂಬ ಭಾವನೆ ತೊಲಗಿಸಿ ಸಮಾನತೆಯ ಕ್ರಾಂತಿ ಮೂಡಿಸಿದರು ಎಂದು ಹೇಳಿದರು.
ನಗರ್ತ ಸಮಾಜದ ಭರತನಾಟ್ಯ ಕಲಾವಿದೆ ಕೀರ್ತಿಶ್ರೀ ಮತ್ತು ಮತ್ತು ಮಾಲೂರು ನಗರದ ದ್ಯಾಪಸಂದ್ರ ಸಹಕಾರ ಸಂಘದ ಉಪಾಧ್ಯಕ್ಷ ಬೊಪ್ಪನಹಳ್ಳಿ ಮಲ್ಲಿಕಾರ್ಜುನಯ್ಯ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕಚೇರಿಯ ಮುಂಭಾಗದಲ್ಲಿ ಬಸವೇಶ್ವರರ ಪುತ್ತಳಿಕೆಯ ಪಲ್ಲಕ್ಕಿ ಮೆರವಣಿಗೆಗೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದರು.
ತಾಲೂಕು ಪಂಚಾಯಿತಿ ಇಒ ಕೃಷ್ಣಪ್ಪ, ಬಿಇಒ ಕೆಂಪಯ್ಯ, ಪೊಲೀಸ್​ ಇನ್​ಸ್ಪೆಕ್ಟರ್​ ರಾಮಪ್ಪ ಗುತ್ತೇದಾರ್​, ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ನರಸಿಂಹ, ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಲಿಂಗಪುರ ಕೃಷ್ಣಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಶಿವಶಂಕರಪ್ಪ, ಪದಾಧಿಕಾರಿಗಳಾದ ಶಶಿಧರ್​, ರೇಣುಕಾ ಪ್ರಸಾದ್​, ಸತೀಶ್​ ಆರಾಧ್ಯ, ಚನ್ನವಿರ ದೇವರು, ಎಚ್​.ವಿ.ಲಿಂಗೇಶ್ವರಯ್ಯ, ಷಣ್ಮುಗಯ್ಯ, ಬಸವೇಶ್ವರ ದೇವಾಲಯ ಟ್ರಸ್ಟ್​ ಅಧ್ಯಕ್ಷ ಟಿ.ಸಿ.ನಾಗರಾಜ್​, ಕಾರ್ಯದರ್ಶಿ ಯೋಗೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net