ವಿಜಯವಾಣಿ ವರದಿಗಾರ ಎ. ಅಪ್ಪಾಜಿಗೌಡರಿಗೆ ಸನ್ಮಾನ Vijayavani

ವಿಜಯವಾಣಿ ವರದಿಗಾರ ಎ. ಅಪ್ಪಾಜಿಗೌಡರಿಗೆ ಸನ್ಮಾನ Vijayavani
ವಿಜಯವಾಣಿ ವರದಿಗಾರ ಎ. ಅಪ್ಪಾಜಿಗೌಡರಿಗೆ ಸನ್ಮಾನ Vijayavani
Published on
ಮುಳಬಾಗಿಲು: ಸಮಾಜದ ನಾಲ್ಕನೇ ಅಂಗವಾದ ಪತ್ರಿಕಾ ಕ್ಷೇತ್ರ ವಿಶೇಷವಾದ ಸ್ಥಾನಮಾನ ಹೊಂದಿದ್ದು, ರಾಜ್ಯದ ಇದರಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯ 10 ಮಂದಿ ಪತ್ರಕರ್ತರು ರಾಜ್ಯ ಕಾರ್ಯನಿರ್ತರ ಪತ್ರಕರ್ತರ ಸಂಘದ ವಿವಿಧ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದು, ಇದರಲ್ಲಿ ಮುಳಬಾಗಿಲು ತಾಲೂಕು ವಿಜಯವಾಣಿ ವರದಿಗಾರ ಎ. ಅಪ್ಪಾಜಿಗೌಡ ಆಯ್ಕೆಯಾಗಿರುವುದು ತಾಲೂಕಿಗೆ ಹೆಮ್ಮೆಯ ವಿಷಯ ಎಂದು ತಾಪಂ ಮಾಜಿ ಅಧ್ಯಕ್ಷ ವಕೀಲ ಎಂ.ಎಸ್​. ಶ್ರೀನಿವಾಸ ರೆಡ್ಡಿ ಹೇಳಿದರು. Vijayavani
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸೈನಿಕರ ಬಗ್ಗೆ ವರದಿಯಿಂದ ಸುಣ್ಣವಂಡ ಶ್ರೀನಿವಾಸ ಚಂಗಪ್ಪ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ವಿಜಯವಾಣಿಯ ದಿನಪತ್ರಿಕೆಯ ಮುಳಬಾಗಿಲು ತಾಲೂಕು ವರದಿಗಾರ ಎ.ಅಪ್ಪಾಜಿ ಗೌಡ ಅವರನ್ನು ಸನ್ಮಾನಸಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ ಮುಳಬಾಗಿಲಿನ ಡಿ.ವಿ. ಗುಂಡಪ್ಪ ಅವರು ಸ್ಥಾಪನೆ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಶ್ಲಾಘನೀಯ ಎಂದರು.
ಬಿಕೆಎಸ್​ ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿ.ರಾಮಕೃಷ್ಣಪ್ಪ, ಕದಂಬ ಶಂಕರ್​, ಕಾರ್ಯದರ್ಶಿ ಆರ್​. ಶ್ರೀನಿವಾಸಪ್ಪ, ಸದಸ್ಯರಾದ ಅಮೃತಯ್ಯ, ಸಂಗೊಳ್ಳಿ ವೆಂಕಟೇಶ್​, ನಾಗೇಶ್​ ಬಾಬು, ಆರ್​. ವಿಶ್ವನಾಥ್​, ಹಿರಿಯ ನಾಟಕ ನಿರ್ದೇಶಕ ಚೇತನ್​ ಪ್ರಸಾದ್​, ರೈತ ಮುಖಂಡ ಊರುಕುಂಟೆ ಎಸ್​. ವಿವೇಕ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net