ಮಳೆ ಅರ್ಭಟಕ್ಕೆ ಧರೆಗುರುಳಿದ ಮರಗಳು

ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ಬಿರುಗಾಳಿ ಮಳೆಯಿಂದಾಗಿ ಧರೆಗುರುಳಿದ ಮರ.
ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ಬಿರುಗಾಳಿ ಮಳೆಯಿಂದಾಗಿ ಧರೆಗುರುಳಿದ ಮರ.
Published on

ಪ್ರಮುಖ ಮುಖ್ಯಾಂಶಗಳು

  • ನೆಲಕಚ್ಚಿದ 46 ವಿದ್ಯುತ್ ಕಂಬಗಳು
ಸಿಂಧನೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದ 50ಕ್ಕೂ ಹೆಚ್ಚು ಮರಗಳು ಹಾಗೂ 46ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಭಾರಿ ಮಳೆಯಿಂದಾಗಿ ಬಿಸಿಲಿನಿಂದ ಕಾದಿದ್ದ ಭೂಮಿ ತಂಪಾಗಿದ್ದು, ಸೆಕೆಯಿಂದ ಬಸವಳಿದ ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ಪಿಡಬ್ಲ್ಯುಡಿ ಕ್ಯಾಂಪ್, ರೌಡಕುಂದ ಸೇರಿದಂತೆ ವಿವಿಧೆಡೆ ಬೃಹತ್ ಮರಗಳು ಬಿರುಗಾಳಿಗೆ ನೆಲಕಚ್ಚಿವೆ.
ಆರ್‌ಎಚ್ ಕ್ಯಾಂಪ್‌ನಲ್ಲಿ 12, ಮಣ್ಣಿಕೇರಿ ಕ್ಯಾಂಪ್‌ನಲ್ಲಿ 4, ಸಿಂಗಾಪುರದಲ್ಲಿ 20, ಚನ್ನಳ್ಳಿ ಪ್ರದೇಶದಲ್ಲಿ 10 ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. 
ಎಲ್ಲಿ ಎಷ್ಟು ಮಳೆ?: ತುರ್ವಿಹಾಳ 12 ಎಂಎಂ, ಗುಂಜಳ್ಳಿ 17.4, ಬಾದರ್ಲಿ 45.8, ಕುನ್ನಟಗಿ 17.4, ವಲ್ಕಂದಿನ್ನಿ 17, ಸಾಲಗುಂದ 55.6, ಗೊರೇಬಾಳ 35.02, ಹೆಡಗಿನಾಳ 15.4, ಹುಡಾ 28 ಎಂಎಂ ಮಳೆಯಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net