ಕಲಬುರಗಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವೀತಿಯ ಪಿಯುಸಿ ವಾರ್ಷಿಕ ಪರೀೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮಂಗಳವಾರ ಸತ್ಕರಿಸಿ, ಬಹುಮಾನ ವಿತರಿಸಲಾಯಿತು.
ಜಾಜಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಶಿವಪ್ರಸಾದ ಜಾಜಿ ಮಾತನಾಡಿ, ವಿದ್ಯಾರ್ಥಿಗಳನ್ನು ಅಭಿನಂದಿಸಿ, ಈ ಸಾಧನೆ ನಿರಂತರವಾಗಿರಬೇಕು ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ರವಿಕುಮಾರ ವಲ್ಲಂಸೆಟ್ಟಿ ಮಾತನಾಡಿ, ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿ ಸಾಧನೆಗೆ ಸಹಕರಿಸಿದ ಪಾಲಕರು ಹಾಗೂ ಉಪನ್ಯಾಸಕರಿಗೆ ಕೃತಜ್ಞತೆ ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲ ಮಂಗೇಶಕುಮಾರ ಖಡ್ಕೆ ಮಾತನಾಡಿ, ನಿಮ್ಮ ಎರಡು ವರ್ಷಗಳ ಸತತ ಪರಿಶ್ರಮ ಇಂದು ಫಲ ಸಿಕ್ಕಿದೆ. ಈ ಮೂಲಕ ಉಪನ್ಯಾಸಕರು ಮತ್ತು ಪಾಲಕರಲ್ಲಿ ಸಂತಸ ತಂದಿದೆ ಎಂದರು.
ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಎಂ.ಎಸ್ ಮುಕುಂದ ಹಾಗೂ ಶಿವಪ್ರಸಾದ ಜಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಜಾಜಿ ಫೌಂಡೇಶನ್ ಮಾನವ ಸಂಪನ್ಮೂಲ ಮುಖ್ಯಸ್ಥ ರಮೇಶ ಕುಲಕರ್ಣಿ ಇದ್ದರು.
ದ್ವೀತಿಯ ಪಿಯುಸಿ ವಾರ್ಷಿಕ ಪರೀೆಯಲ್ಲಿ 600ಕ್ಕೆ 589 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಸಮೀರ ಕುಲಕರ್ಣಿಯವರಿಗೆ 10 ಸಾವಿರ ರೂ. ಬಹುಮಾನದ ಚೆಕ್, 584 ಅಂಕ ಪಡೆದ ಅಭಿಜ್ಞಾ ನಾಡಗಿರಿಯವರಿಗೆ 5000 ರೂ. ಚೆಕ್, 581 ಅಂಕ ಪಡೆದ ಅಲೇಖ ಮತ್ತು ನಾಮಿಯಾ ಸಮೀನ ಅವರಿಗೆ ತಲಾ 2500 ರೂ. ಚೆಕ್ ನೀಡಿ ಪಾಲಕರೊಂದಿಗೆ ಸತ್ಕರಿಸಲಾಯಿತು.
ವಿಷಯವಾರು ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕದೊಂದಿಗೆ ಸನ್ಮಾನಿಸಲಾಯಿತು. ಪ್ರಥಮ ಪಿಯುಸಿ ವಾರ್ಷಿಕ ಪರೀೆಯಲ್ಲಿ ಉತ್ತಮ ಅಂಕ ಪಡೆದ ಪ್ರಥಮ , ದ್ವೀತಿಯ, ತೃತೀಯ ಸ್ಥಾನ ಪಡೆದ ವಿದಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶಂಕ್ರಯ್ಯ ಮಠಪತಿ ಸ್ವಾಗತಿಸಿದರು, ಸಂಜಯ ಕಾಶಿ ವಂದಿಸಿದರು. ಶ್ಯಾಮಸುಂದರ ಶಹಾಬಾದಕರ್, ಎವ್ಲಿನ್ ವಿಲ್ಸನ್, ರಾಜೇಶ್ವರಿ ಪಾಟೀಲ್ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸದರು. ಪ್ರಜ್ಞಾ ಕುಲಕರ್ಣಿ ನಿರೂಪಿಸಿದರು. ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.
"
ಶಿಕ್ಷಣ ಎಂಬುದು ಹರಿಯುವ ನೀರು ಇದ್ದಂತೆ. ಹೀಗಾಗಿ ಅಧ್ಯಯನ, ಅಧ್ಯಾಪನ ಕಾರ್ಯ ನಿರಂತರ ನಡೆಯಬೇಕು. ಕಲಿಕೆ ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಪರಿಶ್ರಮದ ಮೂಲಕ ಮುಂದಿನ ಜೀವನ ರೂಪಿಸಿಕೊಳ್ಳಬೇಕು.
— ಶಿವಪ್ರಸಾದ ಜಾಜಿ, ನಿರ್ದೇಶಕ, ಜಾಜಿ ಶಿಕ್ಷಣ ಸಂಸ್ಥೆ ಕಲಬುರಗಿ.