ಬೇಸಿಗೆ ರಜೆ ಇದ್ದ ಕಾರಣ ಕೊತ್ತೂರಿಗೆ ಬಂದಿದ್ದ ವೆಂಕಟೇಶಪ್ಪ ಅವರ ಮೊಮ್ಮಕ್ಕಳಾದ ದೇವಕಿರಣ್ (12) ಹಾಗೂ ವಿನೀತ್ ಕುಮಾರ್ (9) ಸೋಮವಾರ ಕುಂಟೆಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದರು. ಗ್ರಾಮದಲ್ಲಿ ಬೇರೆ ವಾಹನ ಇಲ್ಲದ ಕಾರಣ ಸುಮಾರು 10 ಕಿಮೀ ದೂರವಿರುವ ಮಾಸ್ತಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಆಟೋದಲ್ಲಿ ಮಕ್ಕಳನ್ನು ಕರೆದೊಯ್ಯಲಾಗಿದೆ. ಆದರೆ, ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದ ನಂತರ ಅದೇ ಆಟೋದಲ್ಲಿ ಮರಣೋತ್ತರ ಪರೀಕ್ಷೆಗೆಂದು ಮಾಸ್ತಿಯಿಂದ 16 ಕಿಮೀ ದೂರದ ಮಾಲೂರು ಸರ್ಕಾರಿ ಆಸ್ಪತ್ರೆಗೂ ಅದೇ ಆಟೋದಲ್ಲಿ ಸಾಗಿಸಲಾಗಿದೆ. ಮಾಸ್ತಿ ಆಸ್ಪತ್ರೆಯಿಂದಾದರೂ ಆಂಬುಲೆನ್ಸ್ನಲ್ಲಿ ಶವ ಸಾಗಿಸಬೇಕಿತ್ತು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.