

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ರಾಜ್ಯರಸ್ತೆ ಸಾರಿಗೆ ನಿಗಮದ ಕಾರ್ಮಿಕಸಂಘಟನೆಗಳ ಜಂಟಿ ಕ್ರಿಯಾ ಸಮಿತಿನೌಕರರ ವಿವಿಧ ಬೇಡಿಕೆ ಈಡೇರಿಕೆಗಾಗಿಒತ್ತಾಯಿಸಿ ಬುಧವಾರ (ಮೇ20) ದಿಂದಅನಿರ್ಧಿಷ್ಟಾವಧಿ ಮುಷ್ಕರನಡೆಸುವುದಾಗಿ ಕರಪತ್ರ ಹೊರಡಿಸಿದ್ದು,ಈ ಸಂಬಂಧ ರಾಜ್ಯರಸ್ತೆ ಸಾರಿಗೆ ನಿಗಮವು ನೌಕರರಿಗೆಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆಸೂಚನೆ ನೀಡಿದೆ.
ಕರ್ನಾಟಕಅಗತ್ಯ ಸೇವಾ ನಿರ್ವಹಣಾ ಕಾಯಿದೆ-2013ರಡಿ ಸಾರಿಗೆನಿಗಮಗಳ ಸೇವೆ ಒಳಪಡುವುದರಿಂದನಿಗಮದ ನೌಕರರು ಮುಷ್ಕರದಲ್ಲಿಪಾಲ್ಗೊಳ್ಳುವುದು,ಬೆಂಬಲಿಸುವುದು,ಪ್ರಚೋದಿಸುವುಕಾನೂನಿಗೆ ವಿರುದ್ಧವಾಗಿದೆ.ರಾಜ್ಯದ ಎಲ್ಲ4 ರಸ್ತೆಸಾರಿಗೆ ನಿಗಮಗಳು ಸಾರ್ವಜನಿಕಉಪಯುಕ್ತ ಸೇವಾ ಸಂಸ್ಥೆಗಳಾಗಿರುವುದರಿಂದಇಲ್ಲಿ ಕೆಲಸ ಮಾಡುವ ಉದ್ಯೋಗಿಗಳುಯಾವುದೇ ಪ್ರತಿಭಟನೆಯಲ್ಲಿಪಾಲ್ಗೊಳ್ಳದಂತೆ ಸೂಚಿಸಿದೆ.
ಎಂದಿನಂತೆನೌಕರರು ದೈನಂದಿನ ಕರ್ತವ್ಯದಲ್ಲಿಪಾಲ್ಗೊಂಡು ಸಾರ್ವಜನಿಕ ಸೇವೆಯಲ್ಲಿತೊಡಗಿಕೊಳ್ಳಬೇಕು.ಅನಿವಾರ್ಯಪರಿಸ್ಥಿತಿಯನ್ನು ಹೊರತು ಪಡಿಸಿಯಾವುದೇ ಕಾರಣಕ್ಕೂ ರಜೆ ಹಾಕುವಂತಿಲ್ಲ.ಒಂದು ವೇಳೆಕೆಲಸಕ್ಕೆ ಗೈರು ಹಾಜರಾದರೆ,ಹೈಕೋರ್ಟಿನ ಈಹಿಂದಿನ ಆದೇಶದನ್ವಯ ವೇತನಕಡಿತಗೊಳ್ಳುವುದರ ಜೊತೆಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದುನಿಗಮದ ವ್ಯವಸ್ಥಾಪಕ ಅಕ್ರಮ ಪಾಷಾಹೇಳಿಕೆಯಲ್ಲಿ ಎಚ್ಚರಿಕೆನೀಡಿದ್ದಾರೆ.
ಸಾರಿಗೆನಿಗಮದ ಕಾರ್ಮಿಕ ಸಂಘಟನೆಗಳ ಜಂಟಿಕ್ರಿಯಾ ಸಮಿತಿಯಿಂದ ಹೊರಬರುತ್ತಿರುವುದಾಗಿಕರ್ನಾಟಕ ರಾಜ್ಯ ರಸ್ತೆ ಸಾರಿಗೆನಿಗಮದ ಪ.ಜಾ./ಪ.ಪಂ.ನೌಕರರ ಸಂಘಹೇಳಿದೆ. ಈವರೆಗೆಜಂಟಿ ಕ್ರಿಯಾ ಸಮಿತಿಯ ಭಾಗವಾಗಿದ್ದಸಂಘವು ಇನ್ನು ಮುಂದೆ ಸ್ವತಂತ್ರವಾಗಿಕಾರ್ಯ ನಿರ್ವಹಿಸಲಿದ್ದು,ಜಂಟಿ ಕ್ರಿಯಾಸಮಿತಿಯಿಂದ ಹೊರ ಬರುವುದಾಗಿೋಷಿಸಿದೆ. ಸಂಘದಅಧ್ಯಕ್ಷ ಎ್.ಎಚ್.ಜಕ್ಕಪ್ಪನೇತೃತ್ವದಲ್ಲಿ ಈ ನಿರ್ಣಯಕೈಗೊಳ್ಳಲಾಗಿದ್ದು,ನಾಳಿನ ಮುಷ್ಕರದಲ್ಲಿಸಂಘದ ಯಾವುದೇ ಪದಾಧಿಕಾರಿಗಳು,ಸದಸ್ಯರುಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.