ತಾಂತ್ರಿಕ ದೋಷಕ್ಕೆ ಸಾರಿಗೆ ಬಸ್​ ಬೆಂಕಿಗಾಹುತಿ

Transport bus gutted by fire due to technical fault.
Transport bus gutted by fire due to technical fault.
Published on

ನಗರಗೆರೆ ಹೋಬಳಿ ಎಂ.ಗೊಲ್ಲಹಳ್ಳಿ ಸಮೀಪ ಶನಿವಾರ ಬಸ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಹೋಗಿದ್ದು, ಚಾಲಕನ ಸಮಯಪ್ರೆಯಿಂದ ಪ್ರಯಾಣಿಕರೆಲ್ಲರೂ ಪ್ರಾಣಹಾನಿಯಾಗದೆ ಸುರತವಾಗಿದ್ದಾರೆ.

ಸ್ಟಾರ್ಟರ್​ ಸಮಸ್ಯೆಯಿಂದ ಹೊಗೆ ಕಾಣಿಸಿಕೊಂಡು ಶಾರ್ಟ್​ಸಕ್ಯೂರ್ಟ್​ ಉಂಟಾದ ಹಿನ್ನೆಲೆಯಲ್ಲಿ ಈ ಟನೆ ಸಂಭವಿಸಿದೆ. ಬಸ್​ನಲ್ಲಿ 10 ವಿದ್ಯಾರ್ಥಿಗಳು ಸೇರಿ 36 ಜನ ಪ್ರಯಾಣಿಸುತ್ತಿದ್ದರು. ಚಾಲಕನ ಸಮಯಪ್ರೆಯಿಂದ ಅವಡ ಸಂಭವಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ.

— ರವಿಶಂಕರ್​, ಡಿಪೋ ವ್ಯವಸ್ಥಾಪಕ ಗೌರಿಬಿದನೂರು

ಗೌರಿಬಿದನೂರು ಟಕಕ್ಕೆ ಸೇರಿದ ಕೆಎಸ್​ಆರ್​ಟಿಸಿ ಬಸ್​ ಗೌರಿಬಿದನೂರಿನಿಂದ ಮರಿಪಡಗು ಗ್ರಾಮಕ್ಕೆ ತೆರಳುತಿತ್ತು. ಎಂ.ಗೊಲ್ಲಹಳ್ಳಿ ಸಮೀಪ ಬರುತ್ತಿದ್ದಾಗ ಬಸ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಚಾಲಕ ಬಸ್​ ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net