ಪಿಡಿಒ, ಕಂಪ್ಯೂಟರ್ ಆಪರೇಟರ ವರ್ಗಾವಣೆಗೊಳಿಸಿ

ಕೊಟ್ಟೂರು ತಾಲೂಕು ಪಂಚಾಯತಿ ಇಒ ಡಾ.ಆನಂದ ಕುಮಾರ್ ಸೋಮವಾರ ಹ್ಯಾಳ್ಯಾ ಹಾಗೂ ಮಲ್ಲನಾಯಕನಹಳ್ಳಿ  ಗ್ರಾಮಸ್ಥರ ಸಭೆ ನಡೆಸಿದರು. ಗ್ರಾಮಸ್ಥರಾದ ಆಕಾಶ, ರಮೇಶ, ಮಂಜಮ್ಮ, ರೇಣುಕಮ್ಮ,  ನಾಗರಾಜ್ ಇತರರಿದ್ದರು.
ಕೊಟ್ಟೂರು ತಾಲೂಕು ಪಂಚಾಯತಿ ಇಒ ಡಾ.ಆನಂದ ಕುಮಾರ್ ಸೋಮವಾರ ಹ್ಯಾಳ್ಯಾ ಹಾಗೂ ಮಲ್ಲನಾಯಕನಹಳ್ಳಿ ಗ್ರಾಮಸ್ಥರ ಸಭೆ ನಡೆಸಿದರು. ಗ್ರಾಮಸ್ಥರಾದ ಆಕಾಶ, ರಮೇಶ, ಮಂಜಮ್ಮ, ರೇಣುಕಮ್ಮ, ನಾಗರಾಜ್ ಇತರರಿದ್ದರು.
Published on
ಕೊಟ್ಟೂರು: ಹ್ಯಾಳ್ಯಾ ಗ್ರಾಪಂನಲ್ಲಿ ಭ್ರಷ್ಟಾಚಾರ ಹಾಗೂ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಹ್ಯಾಳ್ಯಾ ಮತ್ತು ಮಲ್ಲನಾಯಕನಹಳ್ಳಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ತಾಪಂ ಇಒಗೆ ದೂರು ಸಲ್ಲಿಸಿದರು. 
ಹ್ಯಾಳ್ಯಾ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಬಳಿಕ ತಾಪಂ ಕಚೇರಿಗೆ ಆಗಮಿಸಿ ಗ್ರಾಪಂ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರನ್ನು  ಕೂಡಲೇ ವರ್ಗಾವಣೆಗೊಳಿಸುವಂತೆ ಇಒ ಡಾ.ಆನಂದ ಕುಮಾರ್ ಅವರನ್ನು ಆಗ್ರಹಿಸಿದರು. 
ಹ್ಯಾಳ್ಯಾ ಗ್ರಾಮಸ್ಥ ಆಕಾಶ ಮಾತನಾಡಿ, ಎಸ್ಸಿ ಸಮುದಾಯದವರಿಗೆ ಉದ್ಯೋಗ ಖಾತ್ರಿ ಕೆಲಸ ಕೊಡುತ್ತಿಲ್ಲ ಎಂದು ದೂರಿದರು. ಮಲ್ಲನಾಯಕನಹಳ್ಳಿ ಗ್ರಾಮಸ್ಥ ರಮೇಶ ಮಾತನಾಡಿ, ಲಂಚ ಕೊಡದೆ ಗ್ರಾಪಂನಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ದೂರಿದರು.
 ಮಲ್ಲನಾಯಕನಹಳ್ಳಿಯ ಮಂಜಮ್ಮ  ಮಾತನಾಡಿ, ಎರಡು ವರ್ಷಗಳಿಂದ ಪಿಡಿಒ ಗಂಗಾಧರ, ಉದ್ಯೋಗ ಖಾತ್ರಿ ಕಾರ್ಡ್ ಕೊಡದೆ ದಿನದೂಡುತ್ತಿದ್ದಾರೆ ಎಂದರು.
ನಿವಾಸಿ ನಾಗರಾಜ ಮನೆಯ ಮ್ಯುಟೇಷನ್‌ಗೆ ಎಂಟು ಸಾವಿರ ರೂ. ಕೊಟ್ಟಿದ್ದಾಗಿ ಹೇಳಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಇಒ ಭರವಸೆ ನೀಡಿದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net