ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಘೋರ ದುರಂತ: ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಸಾವು; ತನಿಖೆಗೆ ಬಿಎಂಆರ್‌ಸಿಎಲ್ ಆದೇಶ! Labour Electrocuted in Metro Station

ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಗುರಪ್ಪ (70) ದಾರುಣ ಸಾವು
ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಗುರಪ್ಪ (70) ದಾರುಣ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್ ಅವಘಡ
  • ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಗುರಪ್ಪ (70) ದಾರುಣ ಸಾವು
  • ಬಿಎಂಆರ್‌ಸಿಎಲ್‌ನಿಂದ ತನಿಖೆಗೆ ಆದೇಶ
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿಯಂತಿರುವ ನಮ್ಮ ಮೆಟ್ರೋ ಇತ್ತೀಚೆಗೆ ಕೆಲ ಅಹಿತಕರ ಘಟನೆಗಳ ಮೂಲಕ ಅಪಖ್ಯಾತಿಗೆ ಗುರಿಯಾಗುತ್ತಿದೆ. ಕೆಲ ದಿನಗಳ ಹಿಂದೆ ನಾಗಸಂದ್ರದ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೆ, ಶುಕ್ರವಾರ (ಜೂ. 26) ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್​​ ಸ್ಪರ್ಶದಿಂದ (Labour Electrocuted in Metro Station) ಕಾರ್ಮಿಕನ ದಾರುಣ ಸಾವಾಗಿದೆ.
ಟ್ರಿನಿಟಿ ಮೆಟ್ರೋ ನಿಲ್ದಾಣದ ಮೆಟ್ರೋ ಕಂಬಗಳಿಗೆ ವಿದ್ಯುತ್​ ಸಂಪರ್ಕದ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ, ವಿದ್ಯುತ್​ ಅಫಘಾತ ಸಂಭವಿಸಿದ್ದು, ಗುತ್ತಿಗೆ ಕಾರ್ಮಿಕ ಗುರಪ್ಪ (70) ಸಾವನ್ನಪ್ಪಿರುವುದು ವರದಿಯಾಗಿದೆ.

ವಿಡಿಯೋ ವೈರಲ್​!

ಈ ಅಫಘಾತದ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಜನರು ಮೆಟ್ರೋ ಆಡಳಿತ ವರ್ಗದ ಮೇಲೆ ಕೆಂಡಕಾರುತ್ತಿದ್ದಾರೆ.
ಈ ಘಟನೆಯು ಶುಕ್ರವಾರ ಮಧ್ಯಾಹ್ನ 3:30 - 4:00 ರ ಸಮಯದಲ್ಲಿ ನಡೆದಿದ್ದು, ಪಿಲ್ಲರ್​ ನ. 153 ರಲ್ಲಿ ವಿದ್ಯುತ್​ ಸಂಪರ್ಕ ನೀಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ.
https://x.com/dpkBopanna/status/2070694886899433629?s=20
ವಿದ್ಯುತ್​ ಸಂಪರ್ಕಕ್ಕೆ ಬಂದ ಗುರಪ್ಪ ತಕ್ಷಣ ಕುಸಿದು ಬಿದ್ದಿದ್ದಾರೆ. ಕೂಡಲೇ ಗುರಪ್ಪನನ್ನು ಹತ್ತಿರದ ಸೇಂಟ್​ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಗುರಪ್ಪ ಮೃತಪಟ್ಟಿದ್ದಾಗಿ ಧೃಡಿಕರಿಸಿದ್ದಾರೆ.

ಬಿಎಮ್​​ಆರ್​ಸಿಎಲ್​ ನಿಂದ ತನಿಖೆ!

ಈ ದುರ್ಘಟನೆ ನಡೆಯಲು ನಿಖರವಾದ ಕಾರಣವೇನು? ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಲಾಗಿತ್ತೆ? ಅಥವಾ ಇದೊಂದು ಆಕಸ್ಮಿಕ ಘಟನೆಯೇ? ಎಂದು ತಿಳಿಯಲು ಮೆಟ್ರೋ ಆಡಳಿತ ಮಂಡಳಿಯಾದ ಬಿಎಮ್​​ಆರ್​ಸಿಎಲ್ ಸಮಗ್ರ ತನಿಖೆಗೆ ಆದೇಶಿಸಿದೆ. ತನಿಖೆ ಮುಗಿದ ನಂತರ ವರದಿಯನ್ನು ನೀಡಲಾಗುದೆಂದು ​ಬಿಎಮ್​​ಆರ್​ಸಿಎಲ್ ತಿಳಿಸಿದ್ದು, ಮೃತ ಗುರಪ್ಪನ ಸಾವಿಗೆ ಸಂತಾಪ ಸೂಚಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net