ಕುತ್ತಿಗೆಯಲ್ಲಿ ಕೆಜಿಗಟ್ಟಲೆ ಚಿನ್ನ... ಆದರೆ ಎಲ್ಲವೂ ನಕಲಿ! 32 ಲಕ್ಷ ರೂ. ವಂಚನೆ ಪ್ರಕರಣದಲ್ಲಿ ರೀಲ್ಸ್​ ಸ್ಟಾರ್​ ಸೂರ್ಯಾಭಾಯ್ ಅರೆಸ್ಟ್​! Instagram Reels Star Suryabhai Arrest

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಪ್ತನೆಂದು ಹೇಳಿಕೊಂಡು 32 ಲಕ್ಷ ವಂಚಿಸಿದ್ದ ಸೂರ್ಯಾಭಾಯ್ ಅರೆಸ್ಟ್​​
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಪ್ತನೆಂದು ಹೇಳಿಕೊಂಡು 32 ಲಕ್ಷ ವಂಚಿಸಿದ್ದ ಸೂರ್ಯಾಭಾಯ್ ಅರೆಸ್ಟ್​​
Published on

ಪ್ರಮುಖ ಮುಖ್ಯಾಂಶಗಳು

  • ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆಪ್ತನೆಂದು ಹೇಳಿಕೊಂಡು 32 ಲಕ್ಷ ವಂಚಿಸಿದ್ದ ಸೂರ್ಯಾಭಾಯ್ ಅರೆಸ್ಟ್​​
  • ತಾಮ್ರ, ಸ್ಟೀಲ್ ಸರಕ್ಕೆ ಗೋಲ್ಡ್ ಪಾಲಿಶ್ ಹಾಕಿ ಕೋಟ್ಯಧಿಪತಿಯಂತೆ ಪೋಸ್ ಕೊಡ್ತಿದ್ದ ಸೂರ್ಯಾಭಾಯ್
  • ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ಜನರಿಗೆ ಪಂಗನಾಮ
ಹೈದರಾಬಾದ್​: ಕತ್ತಲ್ಲಿ ಕೆಜಿಗಟ್ಟಲೆ ಬಂಗಾರದ ಚೈನ್​ನ್ನು ಧರಿಸಿ, ನಾನು ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಆಪ್ತನೆಂದು ಹೇಳಿಕೊಂಡು ಜನರಿಗೆ ಸುಮಾರು 32 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸೂರ್ಯಾಭಾಯ್ (Instagram Reels Star Suryabhai Arrest)​ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ನನಗೆ ತೆಲಂಗಾಣ ಸಿಎಂ ಗೊತ್ತಿದ್ದಾರೆ, ಸಿಟಿಯಲ್ಲಿರುವ ಎಲ್ಲಾ ಅಧಿಕಾರಿಗಳ ಪರಿಚಯ ನನಗಿದೆ ಕಡೆಮೆ ಬೆಲೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಚಿನ್ನವನ್ನು ತಂದುಕೊಡುವುದಾಗಿ ನಂಬಿಸಿ ಮೋಸ ಮಾಡಿದ ಹಿನ್ನಲೆ ಸೂರ್ಯಾಭಾಯ್​ ಪೊಲೀಸರ ಅತಿಥಿಯಾಗಿದ್ದಾನೆ.

ಸೂರ್ಯಾ ಧರಿಸುತ್ತಿದ್ದದ್ದೆ ನಕಲಿ ಚಿನ್ನ!

ಇನ್​ಸ್ಟಾಗ್ರಾಮ್​ನಲ್ಲಿ ಕುತ್ತಿಗೆ ಮೇಲೆ ಕೆಜಿಗಟ್ಟಲೇ ಚಿನ್ನವನ್ನು ಧರಿಸಿ ರೀಲ್ಸ್​ ಮಾಡುತ್ತಿದ್ದ ಸೂರ್ಯಾಭಾಯ್​ ನನಗೆ ಕಸ್ಟಮ್​ ಅಧಿಕಾರಿಗಳ ಪರಿಚಯವಿದೆ. ಅಷ್ಟೇ ಏಕೆ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ನನ್ನ ಗೆಳೆಯ ಎಂದೆಲ್ಲಾ ಹೇಳಿ ಜನರಿಗೆ ಕಡಿಮೆ ದರದಲ್ಲಿ ಚಿನ್ನ ತಂದು ಕೊಡುವುದಾಗಿ ಹೇಳಿ ಪಂಗನಾಮ ಹಾಕಿದ್ದಾನೆ.
ನಂತರ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಎಸ್. ರವಿಂಡೆ ಇವನನ್ನು ವಿಚಾರಣೆ ಮಾಡಿದಾಗ, ಸೂರ್ಯಾಭಾಯ್​ ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲಿ ಧರಿಸುತ್ತಿದ್ದದ್ದೆ ನಕಲಿ ಚಿನ್ನ ಎಂದು ತಿಳಿದುಬಂದಿದೆ. ತಾಮ್ರ ಮತ್ತು ಸ್ಟೀಲ್​ ಲೋಹಕ್ಕೆ ಚಿನ್ನದ ಪಾಲಿಶ್​ ಮಾಡಿದ ಸರವನ್ನು ಧರಿಸಿ ತಾನೊಬ್ಬ ಆಗರ್ಭ ಶ್ರೀಮಂತನೆಂದು ಪೋಸ್​ ಕೊಡುತ್ತಿದ್ದ ಸೂರ್ಯಾಭಾಯ್​ ಈಗ ಕಂಬಿ ಏಣಿಸುತ್ತಾ ನಿಲ್ಲುವಂತಾಗಿದೆ.
ಜನರೇ ವಂಚಕರ ಬಲೆಗೆ ಬೀಳಬೇಡಿ!
ಈ ಸೂರ್ಯಾ ಕಡಿಮೆ ಬೆಲೆಗೆ ಚಿನ್ನವನ್ನು ತಂದು ಕೊಡುವುದಾಗಿ ನಂಬಿಸಿ, ಅಡ್ವಾನ್ಸ್​ ನೀಡಿದ ಬಳಿಕ ಅವರ ನಂಬರ್​ನ್ನು ಬ್ಲಾಕ್ ಮಾಡುತ್ತಿದ್ದನಂತೆ. ನಂತರ ಇವನ ವಿರುದ್ಧ ಸರಣಿ ದೂರುಗಳು ಬಂದ ಬಳಿಕ ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದಾರೆ.
ಸೋಷಿಯಲ್​ ಮೀಡಿಯಾನಲ್ಲಿ ನಾನು ದೊಡ್ಡ ಉದ್ಯಮಿ, ನಾನು ರಿಯಲ್​ ಎಸ್ಟೇಟ್​ ಬ್ರೋಕರ್​, ನಾನು ಚಿನ್ನದ ಡೀಲರ್​ ಎಂದು ಸುಮಾರು ಜನ ಪೋಸ್​ ಕೊಡುತ್ತಾರೆ. ಇವರನ್ನು ಕಣ್ಮುಚ್ಚಿ ನಂಬಿ ಮೋಸ ಹೋಗಬೇಡಿ. ಸ್ವಲ್ಪ ವಿವೇಕವನ್ನು ಉಪಯೋಗಿಸಿ, ಅನುಮಾನ ಬಂದರೆ ಮಾಹಿತಿ ನೀಡಿ ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net