ಬಳ್ಳಾರಿ: ಮದುವೆಯ ಸಂಭ್ರಮದ ಮನೆ ಇನ್ನು ಮಂಟಪದ ಸಿಂಗಾರದಿಂದಲೂ ಹೊರಬಂದಿರಲಿಲ್ಲ. ಹೊಸ ಜೀವನದ ನೂರಾರು ಕನಸುಗಳೊಂದಿಗೆ ಕೈಹಿಡಿದ ದಂಪತಿಗಳ ಮುಖದಲ್ಲಿನ ನಗು ಇನ್ನೂ ಮಾಸಿರಲಿಲ್ಲ. ಆದರೆ, ವಿಧಿಯ ಕ್ರೂರ ಆಟಕ್ಕೆ ಮದುವೆಯಾಗಿ ಕೆಲವೇ ಗಂಟೆಗಳು ಕಳೆಯುವಷ್ಟರಲ್ಲಿ ನವವರನೊಬ್ಬ ( Newlywed Groom ) ಭೀಕರವಾಗಿ ಕೊಲೆಯಾದ ಹೃದಯವಿದ್ರಾವಕ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದ್ದು, ಮದುವೆ ಮನೆ ಕ್ಷಣಾರ್ಧದಲ್ಲಿ ಸ್ಮಶಾನ ಸದೃಶವಾಗಿದೆ.