ಪ್ರಸ್ತುತ ಸಂಘಟನೆಯಲ್ಲಿ ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು, ವಕೀಲರು, ಉದ್ಯಮಿಗಳು, ಕಾರ್ಪೊರೇಟ್ ಅಧಿಕಾರಿಗಳು ಸೇರಿ ವಿವಿಧ ಕ್ಷೇತ್ರಗಳಲ್ಲಿನ 800 ಸ್ವಯಂಸೇವಕರು ಟ್ರಾಫಿಕ್ ವಾರ್ಡನ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಚಾರ ನಿಯಂತ್ರಣ, ವಿಐಪಿ ಹಾಗೂ ವಿಐವಿಐಪಿ ಸಂಚಾರ ವ್ಯವಸ್ಥೆ, ಮ್ಯಾರಥಾನ್, ಸಾರ್ವಜನಿಕ ಉತ್ಸವಗಳು, ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳಲ್ಲಿ ಬೆಂಗಳೂರು ಸಂಚಾರ ಪೊಲೀಸರಿಗೆ ಸ್ವಯಂಪ್ರೇರಿತವಾಗಿ ನೆರವಾಗುತ್ತಿದ್ದಾರೆ.