

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಪೀಣ್ಯಎಲಿವೇಟೆಡ್ ಫ್ಲೈಓವರ್ (ಡಾ.ಶ್ರೀಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)ಮೇಲೆಏ13ರಿಂದ17ರವರೆಗೆಐದು ದಿನಗಳ ಕಾಲ ಸಂಪೂರ್ಣ ಸಂಚಾರನಿರ್ಬಂಧಿಸಲಾಗಿದ್ದು,ಸಂಚಾರಸಿಕ್ಕು ತೀವ್ರವಾಗಲಿದೆ.
ರಾಷ್ಟ್ರೀಯಹೆದ್ದಾರಿ-4ರಪ್ರಮುಖ ಸಂಪರ್ಕ ಸೇತುವೆಯಾಗಿರುವಈ ಫ್ಲೈಓವರ್‌ನಲ್ಲಿ ಕಳೆದ ಕೆಲವರ್ಷಗಳಿಂದ ಬಿರುಕುಗಳು ಕಂಡುಬಂದಿದ್ದವು.ಕಳೆದಹಲವು ದಿನಗಳಿಂದ ದುರಸ್ಥಿ ಕಾರ್ಯ ನಡೆಯುತ್ತಿತ್ತು.ಇದೀಗದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು,ಹೊಸದಾಗಿಕೇಬಲ್ ಅಳವಡಿಸಿರುವುದರಿಂದ ಅಂತಿಮ ಹಂತದ ಭಾರ ಪರೀಕ್ಷೆ (ಲೋಡ್ಟೆಸ್ಟಿಂಗ್)ನಡೆಸಲುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ(ಎನ್‌ಎಚ್‌ಎಐ)ಮುಂದಾಗಿದೆ.ಅದಕ್ಕಾಗಿ ಸೋಮವಾರ (ಏ.13)ಬೆಳಗ್ಗೆ5ಗಂಟೆಯಿಂದಶುಕ್ರವಾರ (ಏ.17)ಬೆಳಗ್ಗೆ11ಗಂಟೆಯವರೆಗೆಎಲ್ಲಾ ವಿಧದ ವಾಹನಗಳ ಸಂಚಾರವನ್ನುಸಂಪೂರ್ಣವಾಗಿ ನಿಷೇಧಿಸುವಂತೆಬೆಂಗಳೂರು ಸಂಚಾರ ಪೊಲೀಸರಿಗೆಮನವಿ ಸಲ್ಲಿಸಿದೆ.ಸಂಚಾರಪೊಲೀಸರು ಸಂಚಾರ ನಿರ್ಬಂಧಕ್ಕೆಆದೇಶ ಹೊರಡಿಸಿದ್ದಾರೆ.
ಸಂಚಾರನಿರ್ಬಂಧವು ಕೆನ್ನಮೆಟಲ್ ವಿಡಿಯಾ ಮೇಲ್ಪಥದಿಂದ ಎಸ್‌ಆರ್‌ಎಸ್ ಡೌನ್ ರಾಂಪ್‌ವರೆಗೆ ಹಾಗೂ ಸಿಎಂಟಿಐ ಜಂಕ್ಷನ್‌ನಿಂದ ಪಾರ್ಲೆ-ಜಿಟೋಲ್‌ಗೇಟ್‌ವರೆಗೆ ಅನ್ವಯವಾಗಲಿದೆ.ಇದರಿಂದತುಮಕೂರು ರಸ್ತೆಯಲ್ಲಿ ಸಂಚರಿಸಬೇಕಾದಟ್ರಕ್ಕು,ಸಾರ್ವಜನಿಕಸಾರಿಗೆ ಮತ್ತು ಸ್ವಂತ ವಾಹನಎಲ್ಲವೂ ಕೂಡ ಮೇಲ್ಸೇತುವೆ ಕೆಳಗಿನಹೆದ್ದಾರಿಯಲ್ಲಿ ಸಂಚರಿಸಬೇಕು.
ಬೆಂಗಳೂರಿನಹೆಬ್ಬಾಗಿಲಿನಂತಿರುವ ಪೀಣ್ಯಮೇಲ್ಸೇತುವೆ ಕ್ಲೋಸ್ ಆಗುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಲಿದೆ.ಈಗಾಗಲೇಪೊಲೀಸರು ಬದಲಿ ಮಾರ್ಗಗಳನ್ನುಗುರುತಿಸಿದ್ದು,ಸೂಕ್ತವ್ಯವಸ್ಥೆಯನ್ನು ಕೈಗೊಂಡಿದ್ದಾರೆ.ಆದರೂಫ್ಲೈಓವರ್ ಸಂಚಾರ ನಿರ್ಬಂಧದಹಿನ್ನೆಲೆಯಲ್ಲಿ ಎಲ್ಲ ವಾಹನಗಳುಎನ್.ಎಚ್.4ನ್ನೇಆಶ್ರಯಿಸಬೇಕು.ಪಾರ್ಲೆಜಿಟೋಲ್ವರೆಗಿನ ಹೆದ್ದಾರಿಯಲ್ಲಿಹಲವು ಪ್ರಮುಖ ಜಂಕ್ಷನ್‌ಗಳಿರುವುದರಿಂದಎಲ್ಲ ಕಡೆಗಳಿಂದ ವಾಹನಗಳುಹೆದ್ದಾರಿಗೆ ಬಂದು ಸೇರುತ್ತವೆ.ಇದರಿಂದನಾಲ್ಕು ದಿನಗಳ ಕಾಲ ಸಂಚಾರ ಸಿಕ್ಕುಸಾಮಾನ್ಯ.
ಸದ್ಯಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆಇರುವುದರಿಂದ ಊರುಗಳಿಗೆ ಹೋಗುವವರಸಂಖ್ಯೆ ಹೆಚ್ಚಾಗಿದೆ.ಇದರಜೊತೆಗೆ ವಾರಾಂತ್ಯದ ರಜೆಯೊಂದಿಗೆಏ.14ರಅಂಬೇಡ್ಕರ್ ಜಯಂತಿ ಇರುವುದರಿಂದಸಾಲು ಸಾಲು ಸರ್ಕಾರಿ ರಜೆಯಲ್ಲಿಊರುಗಳಿಗೆ ಹೋಗುವವರ ವಾಹನಗಳಸಂಖ್ಯೆ ಈ ಮಾರ್ಗದಲ್ಲಿ ಸಹಜವಾಗಿಯೇಹೆಚ್ಚಾಗಿರುತ್ತವೆ.ನಗರಕ್ಕೆಬರುವ ಮತ್ತು ನಗರದಿಂದ ಬೇರೆ ಬೇರೆಊರುಗಳಿಗೆ ಹೋಗುವ ಬಹುತೇಕ ವಾಹನಗಳಿಗೆಗೇಟ್‌ವೇ ನಂತಿರುವುದರಿಂದಯಶವಂತಪುರದಿಂದ ತುಮಕೂರು ರಸ್ತೆಮಾರ್ಗವಾಗಿ ದಿನದ 18ಗಂಟೆಗಳಕಾಲವೂ ಸಂಚಾರ ದಟ್ಟಣೆ ಇರುತ್ತದೆ.ಈಎಲ್ಲ ಕಾರಣಗಳಿಗಾಗಿ ಮೇಲ್ಸೇತುವೆಮೇಲಿನ ಸಂಚಾರ ನಿರ್ಬಂಧ ಬೆಂಗಳೂರಿನಸಂಚಾರ ಸಿಕ್ಕು ಸಮಸ್ಯೆಯನ್ನುಮತ್ತಷ್ಟು ಹೆಚ್ಚಿಸುವುದುಗ್ಯಾರಂಟಿ.
ನಗರದಸಂಚಾರ ದಟ್ಟಣೆಯನ್ನು ತಗ್ಗಿಸುವಮಹತ್ವಾಕಾಂಕ್ಷಿ ಉದ್ದೇಶದಿಂದನಿರ್ಮಾಣಗೊಂಡಿರುವ ಡಾ.ಶ್ರೀಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯು2010ರಲ್ಲಿಸಾರ್ವಜನಿಕರ ಬಳಕೆಗೆ ಮುಕ್ತವಾಯಿತು.ನಂತರ2021ರಡಿಸೆಂಬರ್‌ನಲ್ಲಿ 3ಸ್ಪ್ಯಾನ್‌ಗಳಲ್ಲಿ (ಬೃಹತ್ಸಿಮೆಂಟ್ ಬಾಕ್ಗಳು)ಕೇಬಲ್ದೋಷ ಕಂಡು ಬಂದಿತ್ತು.ಆಗಬಸ್ ಮತ್ತು ಬೃಹತ್ ವಾಹನಗಳಸಂಚಾರವನ್ನು ನಿಷೇಧಿಸಲಾಗಿತ್ತು.2022ರಫೆಬ್ರವರಿಯಿಂದ ಲಘು ವಾಹನಗಳಿಗೆಫ್ಲೈಓವರ್ ಮೇಲೆ ಅನುಮತಿ ನೀಡಲಾಯಿತು.ನಂತರಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಚಂದ್ರಕಿಶನ್ ನೇತೃತ್ವದ ತಜ್ಞರ ಸಮಿತಿನೀಡಿದ ವರದಿ ಆಧಾರದಲ್ಲಿ ಸಿಮೆಂಟ್ಬಾಕ್ಸ್ಗಳಲ್ಲಿನ ಹಳೆಯ ಕೇಬಲ್‌ಗಳನ್ನುತೆಗೆದು ಹೊಸ ಕೇಬಲ ಅಳವಡಿಸಲುನಿರ್ಧರಿಸಲಾಯಿತು.
ಭವಿಷ್ಯದಲ್ಲಿಯಾವುದೇ ಸಮಸ್ಯೆ ಉಂಟಾಗದಂತೆ ಆಧುನಿಕ ತಂತ್ರಜ್ಞಾನದೊಂದಿಗೆವಿನ್ಯಾಸಗೊಳಿಸಿದ ಸುಮಾರು 32ಕೋಟಿವೆಚ್ಚದ 1,400ಕ್ಕೂಹೆಚ್ಚಿನ ಹೊಸ ಕೇಬಲ್‌ಗಳನ್ನುಅಳವಡಿಸುವ ಕಾರ್ಯ ಈಗ ಪೂರ್ಣಗೊಂಡಿದೆ.ಅದರಲೋಡ್ ಟೆಸ್ಟಿಂಗ್‌ಗಾಗಿ ಆಯ್ದನಾಲ್ಕು ಸ್ಪ್ಯಾನ್‌ಗಳ ಮೇಲೆಭಾರವನ್ನು ಹೊರಿಸಿ ಸೇತುವೆಯಸಾಮರ್ಥ್ಯ,ಸ್ಥಿರತೆಮತ್ತು ಸುರಕ್ಷತೆಯನ್ನು ವೈಜ್ಞಾನಿಕವಾಗಿಪರಿಶೀಲಿಸಲಾಗುತ್ತದೆ.
ಎನ್‌ಎಚ್‌ಎಐ ಮನವಿಯಂತೆ ಏ.13ರಿಂದ 4 ದಿನ ಪೀಣ್ಯದಿಂದ ಆರಂಭವಾಗುವ ನೆಲಮಂಗಲ ್ಲೈಓವರ್‌ನ ಸಂಚಾರ ನಿರ್ಬಂಧಿಸಲಾಗಿದೆ. ಮೇಲ್ಸೇತುವೆ ಸಂಚಾರ ಇದ್ದಾಗಲೇ ರಾತ್ರಿ 1 ಗಂಟೆ ವರೆಗೂ ಯಶವಂತಪುರದಿಂದ ಟ್ರಾಫಿಕ್ ಜಾಮ್ ಆಗಲಿದೆ. ಈಗ ಮೇಲ್ಸೇತುವೆ ಸಂಚಾರ ಬಂದ್ ಆಗುವುದರಿಂದ ಟ್ರಾಫಿಕ್ ಸಮಸ್ಯೆ ಬಹಳ ಹೆಚ್ಚಾಗುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ನಿರ್ವಹಿಸುವುದಕ್ಕೆ ನಮ್ಮ ಇಲಾಖೆ ಸಿದ್ಧವಾಗಿದೆ. ನಾಲ್ಕೈದು ದಿವಸ ಡಬ್ಬಲ್ ಡ್ಯೂಟಿ ಅನಿವಾರ್ಯವಾಗಲಿದೆ.
ಬಹುತೇಕ ಬಸ್ಸು, ಲಾರಿಗಳು ಈ ಮಾರ್ಗದಿಂದಲೇ ನಗರವನ್ನು ಪ್ರವೇಶಿಸುವುದರಿಂದ ತುಮಕೂರು ರಸ್ತೆಯಲ್ಲಿ ದಿನಪೂರ್ತಿ ವಾಹನ ದಟ್ಟಣೆ ಇರುತ್ತದೆ. ನಮ್ಮ ಮನೆ ತುಮಕೂರು ರಸ್ತೆ ಸಮೀಪದಲ್ಲೇ ಇರುವುದರಿಂದ ಯಾವಾಗಲೂ ಸಮಸ್ಯೆ ಅನುಭವಿಸುತ್ತೇವೆ. ಟೆಸ್ಟ್ ರನ್ ಉದ್ದೇಶಕ್ಕೆ ನಾಲ್ಕೈದು ದಿನ ್ಲೈಓವರ್ ಕ್ಲೋಸ್ ಮಾಡುತ್ತಾರಂತೆ. ಆಗ ಕೆಳಗಡೆ ಟ್ರಾಫಿಕ್ ಊಹಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಇದು ಅನಿವಾರ್ಯ. ಆದಷ್ಟು ಬೇಗ ಟೆಸ್ಟ್ ರನ್ ಪೂರ್ಣಗೊಳಿಸಿ ಶಾಶ್ವತ ಪರಿಹಾರ ನೀಡಲಿ.