ಟ್ರ್ಯಾಕ್ಟರ್​ ಮಾಲೀಕರು ತಪ್ಪದೆ ವಿಮೆ ಮಾಡಿಸಲಿ

Tractor owners should ensure they get insurance.
Tractor owners should ensure they get insurance.
Published on

ಬೇತಮಂಗಲ:

ಟ್ರ್ಯಾ

ಕ್ಟರ್​ ಚಾಲನೆ ಮಾಡುವಾಗ ಅಪಘಾತವಾದರೆ ಪರವಾನಗಿ, ಇನ್ಸೂರೆನ್ಸ್​ ಇಲ್ಲದಿದ್ದರೆ ಮೃತಪಟ್ಟ ಕುಟುಂಬದವರಿಗೆ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಪ್ರತಿ ಟ್ರ್ಯಾ

ಕ್ಟರ್​ಗೂ ತಪ್ಪದೆ ವಿಮೆ ಮಾಡಿಸಬೇಕು ಎಂದು ಬೇತಮಂಗಲ ವೃತ್ತ ನಿರೀಕ್ಷಕ ಎಸ್​.ಆರ್​.ಜಗದೀಶ್​ ತಿಳಿಸಿದರು.

ಕೃಷಿ ಮತ್ತು ಇತರೆ ಕೆಲಸಗಳಿಗಾಗಿ ಉಪಯೋಗಿಸುವ ಟ್ರಾ$್ಯಕ್ಟರ್​ಗಳಿಂದ ಸಂಭವಿಸುವ ರಸ್ತೆ ಅಪಘಾತ ತಡೆಗಟ್ಟುವ ಮತ್ತು ಸಂಚಾರ ನಿಯಮ ಅರಿವು ಮೂಡಿಸುವ ಉದ್ದೇಶದಿಂದ ಬೇತಮಂಗಲ ವೃತ್ತ ಪೊಲೀಸ್​ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಫಲಕ ಅಳವಡಿಸುವುದು ಕಡ್ಡಾಯಟ್ರ್ಯಾಕ್ಟರ್​ನ ಹಿಂಭಾಗ ಮತ್ತು ಎರಡೂ ಬದಿ ಪ್ರತಿಫಲಕ (ರೇಡಿಯಂ ನಂಬರ್​ ಪ್ಲೇಟ್​) ಅಳವಡಿಸುವುದು ಕಡ್ಡಾಯ. ರಾತ್ರಿ ದೂರದಿಂದಲೇ ಟ್ರಾ$್ಯಕ್ಟರ್​ ಕಾಣುವಂತೆ ಮಾಡಲು ರೇಡಿಯಂ ಸ್ಟಿಕ್ಕರ್​ ಮತ್ತು ಹಿಂಭಾಗದಲ್ಲಿ ಕೆಂಪು ಬಣ್ಣದ ರಿಫ್ಲೆಕ್ಟರ್​ ಇಲ್ಲದ ಮಾಲಿಕರಿಗೆ ದಂಡ ವಿಧಿಸಲಾಗುವುದು ಎಂದು ಎಸ್​.ಆರ್​.ಜಗದೀಶ್​ ಎಚ್ಚರಿಸಿದರು.

ಕ್ಯಾಸಂಬಳ್ಳಿ ಪಿಎಸ್​ಐ ಸಂಗಮೇಶ್​, ಪೊಲೀಸ್​ ಸಿಬ್ಬಂದಿ ಇದ್ದರು.

ಸಂಚಾರ ನಿಯಮ ಪಾಲನೆ ಕಡ್ಡಾಯಟ್ರ್ಯಾಲಿಯಲ್ಲಿ ಹೆಚ್ಚು ತೂಕದ ಮರಳು, ಕಲ್ಲು ಸಾಗಾಟ, ರಸ್ತೆಯಲ್ಲಿ ರ್ನಿಲಕ್ಷ$್ಯದಿಂದ ವಾಹನ ಚಲಾಯಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪರಾಧವಾಗಿದ್ದು, ಸಂಚಾರ ನಿಯಮ ಪಾಲಿಸದಿದ್ದರೆ ಎಫ್​ಐಆರ್​ ದಾಖಲಿಸಿ ಕೋರ್ಟ್​ಗೆ ಹಾಜರುಪಡಿಸಲಾಗುವುದು ಎಂದು ಎಸ್​.ಆರ್​.ಜಗದೀಶ್​ ಎಚ್ಚರಿಸಿದರು.

ವಿಮೆ ಇಲ್ಲದಿದ್ದರೆ ರಸ್ತೆಗೆ ಬರಬೇಡಿ-: ಪ್ರತಿ ಟ್ರ್ಯಾಕ್ಟರ್​ಗೆ ಕಡ್ಡಾಯವಾಗಿ ವಾಹನ ವಿಮೆ ಇರಬೇಕು. ವಿಮೆ ಇಲ್ಲದೆ ರಸ್ತೆಗೆ ಬರಬೇಡಿ. ಒಂದು ವೇಳೆ ಬಂದು ಅಪಘಾತವಾಗಿ ಸಾವು&ನೋವುಗಳಾದರೆ ಮಾಲೀಕರು ಲಕ್ಷಾಂತರ ರೂ. ಪರಿಹಾರ ನೀಡಬೇಕಾಗುತ್ತದೆ. ಪೊಲೀಸರು ತಪಾಸಣೆ ಮಾಡಿ ವಾಹನ ವಶಪಡಿಸಿಕೊಳ್ಳುತ್ತಾರೆ. ಜತೆಗೆ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಆದ್ದರಿಂದ ಎಲ್ಲ ಸಂದರ್ಭದಲ್ಲಿ ವಿಮೆ ಬಹಳ ಸಹಕಾರಿಯಾಗುತ್ತದೆ ಎಂದು ಎಸ್​.ಆರ್​.ಜಗದೀಶ್​ ಕಾನೂನು ಪಾಠ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net