ಬೇತಮಂಗಲ: ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಚಾಲಕ ಇದ್ದಕ್ಕಿದ್ದಂತೆ ಕೆಳಕ್ಕೆ ಬಿದ್ದು, ಅದೇ ಟ್ರಾ$್ಯಕ್ಟರ್ನ ಟಯರ್ ಚಾಲಕನ ಮೇಲೆ ಹಾದು ಹೋದ ಪರಿಣಾಮ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಕೆಜಿಎ್ ತಾಲೂಕು ಕಡಿರಿಗಾನಕುಪ್ಪ ಗ್ರಾಮದ ವೇಣುಗೋಪಾಲ್(48) ಮೃತರು.
ರಾಮಸಾಗರ ಸಮೀಪಕ್ಕೆ ಟ್ರಾ$್ಯಕ್ಟರ್ ಬಾಡಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಸುಂರಪಾಳ್ಯದಲ್ಲಿ ದುರ್ಟನೆ ನಡೆದಿದೆ. ಸುತ್ತಮುತ್ತಲೂ ಇದ್ದ ಜನ ಟ್ರ್ಯಾಕ್ಟರ್ ತಡೆದು ನಿಲ್ಲಿಸುವ ಮೂಲಕ ಹೆಚ್ಚಿನ ಅನಾಹುತ ಆಗದಂತೆ ನೋಡಿಕೊಂಡಿದ್ದಾರೆ.
ವಿಷಯ ತಿಳಿದ ಬೇತಮಂಗಲ ವೃತ್ತ ನಿರೀಕ್ಷಕ ಎಸ್.ಆರ್.ಜಗದೀಶ್ ಸ್ಥಳ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀೆಯ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.