ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಿ

ರಬಕವಿ-ಬನಹಟ್ಟಿ ಸಮೀಪದ ಯರಗಟ್ಟಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಮಾದಕ ವಸ್ತು ವ್ಯಸನ ವಿರೋಧಿ ದಿನಾಚರಣೆ, ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮಕ್ಕೆ ತಾಪಂ ಸಿಇಒ ಬಸವರಾಜ ಐನಾಪುರ ಚಾಲನೆ ನೀಡಿದರು. ಪಿಎಸ್‌ಐ ಶಿವರಾಜ ಧರಿಗೋಣ ಹಾಗೂ ಶಿಕ್ಷಕ ಉತ್ತಮಕುಮಾರ ಮಗದುಮ್ ಮತ್ತಿತರರಿದ್ದರು.
ರಬಕವಿ-ಬನಹಟ್ಟಿ ಸಮೀಪದ ಯರಗಟ್ಟಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಮಾದಕ ವಸ್ತು ವ್ಯಸನ ವಿರೋಧಿ ದಿನಾಚರಣೆ, ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮಕ್ಕೆ ತಾಪಂ ಸಿಇಒ ಬಸವರಾಜ ಐನಾಪುರ ಚಾಲನೆ ನೀಡಿದರು. ಪಿಎಸ್‌ಐ ಶಿವರಾಜ ಧರಿಗೋಣ ಹಾಗೂ ಶಿಕ್ಷಕ ಉತ್ತಮಕುಮಾರ ಮಗದುಮ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವರಾಜ ಐನಾಪುರ ಹೇಳಿಕೆ
  • ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭ
ರಬಕವಿ/ಬನಹಟ್ಟಿ: ಮಾದಕ ವ್ಯಸನವು ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಮಾಜದ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದ್ದು, ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡುವುದಕ್ಕಿಂತ ಗುಣಾತ್ಮಕ ಮತ್ತು ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಹೇಳಿದರು.
ಸಮೀಪದ ಯರಗಟ್ಟಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಿಶ್ವ ಮಾದಕ ವಸ್ತು ವ್ಯಸನ ವಿರೋಧಿ ದಿನಾಚರಣೆ, 2025-26ನೇ ಸಾಲಿನ ಶಾಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ತಾಪಂ ಅನುದಾನದಡಿ ಆದ್ಯತೆಯ ಮೇರೆಗೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಬನಹಟ್ಟಿ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಶಿವರಾಜ ಧರಿಗೋಣ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಮತ್ತು ಕಳ್ಳಸಾಗಣೆಯ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗತಿ ಮೂಡಿಸಿದರು.
ಶಾಲೆ ಅಥವಾ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ಪೊಲೀಸ್ ಇಲಾಖೆ ನೀಡಿರುವ ಕ್ಯೂಆರ್ (ಬಾರ್) ಕೋಡ್ ಸ್ಕ್ಯಾನ್ ಮಾಡಿ ಮಾಹಿತಿ ನೀಡಬಹುದು ಎಂದರು. ತುರ್ತು ನೆರವಿಗೆ 112, ಹಣಕಾಸು ವಂಚನೆ ಸಂಬಂಧ 1930 ಹಾಗೂ ಮಕ್ಕಳ ಸಹಾಯವಾಣಿ 1098 ಅನ್ನು ಬಳಸುವಂತೆ ತಿಳಿಸಿದರು.
ಶಿಕ್ಷಕ ಉತ್ತಮಕುಮಾರ ಮಗದುಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವ್ಯಸನದಿಂದ ಅಪರಾಧ, ಆರೋಗ್ಯ ಸಮಸ್ಯೆ, ಕುಟುಂಬ ಕಲಹ ಹಾಗೂ ಸಾಮಾಜಿಕ ಮೌಲ್ಯಗಳ ಕುಸಿತ ಉಂಟಾಗುತ್ತದೆ. ವ್ಯಸನದಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವ ಸನದಿ ವಹಿಸಿದ್ದರು. ಬಸಪ್ಪ ಕಂಕಣವಾಡಿ, ಪ್ರಭಾರಿ ಮುಖ್ಯೋಪಾಧ್ಯಾಯ ಐ.ಡಿ. ನದಾಫ್ ಉಪಸ್ಥಿತರಿದ್ದರು. ಡಾ. ರಾಜು ಕೊಕ್ಕನವರ ಮತ್ತು ಬಿ.ಕೆ. ಸೋರಗಾಂವಿ ನಿರೂಪಿಸಿದರು. ಎಂ.ಪಿ. ಮೇಗಾಡಿ ಸ್ವಾಗತಿಸಿ, ಆರ್.ಎ. ಲೋಕಾಪೂರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net