ಕೈಯಲ್ಲಿ ಹಣವೂ ಇಲ್ಲದೆ, ಅತ್ತ ವಿಮಾನ ನಿಲ್ದಾಣದ ಒಳಿಗೂ ಹೋಗಲಾಗದೆ ಪ್ರವಾಸಿಗರು ಬೀದಿಯಲ್ಲಿ ಕಾಲ ಕಳೆಯುವಂತಾಗಿದೆ. ಅತಂತ್ರ ಸ್ಥಿತಿಯಲ್ಲಿರುವ ಪ್ರವಾಸಿಗರು ಶಾಸಕರಾದ ಭರತ್ ರೆಡ್ಡಿ , ಬಿ. ನಾಗೇಂದ್ರ ಅವರನ್ನು ಸಂಪರ್ಕಿಸಿ, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಸುರಕ್ಷಿತವಾಗಿ ಭಾರತಕ್ಕೆ ಮರಳಲುನ ನಮಗೆ ವ್ಯವಸ್ಥೆ ಮಾಡಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.