ಮುಧೋಳ ರಾಯಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ರೋಬೊಟಿಕ್ ಟೀಚರ್ ಹಾಗೂ ಎಐ ಲ್ಯಾಬ್‌ಅನ್ನು ಗಣ್ಯರು ಉದ್ಘಾಟಿಸಿದರು. ಡಾ. ತಿಮ್ಮಣ್ಣ ಅರಳಿಕಟ್ಟಿ, ಎ.ಎಸ್. ಯಾದವಾಡ, ಸಮೀರ ಮುಲ್ಲಾ, ಎಂ. ನಾಗರಡ್ಡಿ, ಸವಿತಾ ಅರಳಿಕಟ್ಟಿ, ರಾಜೇಶ್ವರಿ ಅರಳಿಕಟ್ಟಿ, ಚಂದ್ರಶೇಖರ ನಾಗವಂದ ಹಾಗೂ ಮಾರುತಿ ಪವಾರ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ತಿಮ್ಮಣ್ಣ ಅರಳಿಕಟ್ಟಿ ಹೇಳಿಕೆ
ಮುಧೋಳದಲ್ಲಿ ಎಐ ಟೀಚರ್ ಲೋಕಾರ್ಪಣೆ
ಮುಧೋಳ: ಪ್ರಪಂಚದ ಅತ್ಯುತ್ತಮ ತಂತ್ರ ಜ್ಞಾನಗಳು ಮತ್ತು ಸೌಲಭ್ಯಗಳು ನಮ್ಮೂರಿನ ಶಾಲೆಯಲ್ಲಿಯೂ ಲಭ್ಯವಿರಬೇಕು ಎಂಬುದು ನಮ್ಮ ಸಂಸ್ಥೆಯ ಪ್ರಮುಖ ದೃಷ್ಟಿಕೋನವಾಗಿದೆ ಎಂದು ಮುಧೋಳ ರಾಯಲ್ ಸ್ಕೂಲ್‌ನ ಸಂಸ್ಥಾಪಕ ಡಾ. ತಿಮ್ಮಣ್ಣ ಅರಳಿಕಟ್ಟಿ ತಿಳಿಸಿದರು.
ನಗರದ ಅರಳಿಕಟ್ಟಿ ೌಂಡೇಶನ್‌ನ ಮುಧೋಳ ರಾಯಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಎಐ ಟೀಚರ್ ಹಾಗೂ ಎಐ ತಂತ್ರಜ್ಞಾನ ಪ್ರಯೋಗಾಲಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಶಾಲೆ ನಾಳಿನ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುವ ಉದ್ದೇಶ ಹೊಂದಿದೆ. ಉತ್ತರ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ನಮ್ಮ ಶಾಲೆಯಲ್ಲಿ ರೋಬೋಟಿಕ್ಸ್ ಲ್ಯಾಬ್ ಮತ್ತು ಎಐ ಟೀಚರ್ ಪರಿಚಯಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಮುಲ್ಲಾ ಮಾತನಾಡಿ, ಶಾಲೆ ಸಂಸ್ಥಾಪಕ ಡಾ. ಟಿ.ವಿ. ಅರಳಿಕಟ್ಟಿ ಅವರು ‘ಜೈ ತಂತ್ರಜ್ಞಾನ’ ಎನ್ನುವ ಹೊಸ ಪರಿಕಲ್ಪನೆಯನ್ನು ಸೇರಿಸಿ ಭವಿಷ್ಯದ ತಂತ್ರಜ್ಞಾನ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದರು.
ಸಿಪಿಐ ಎಂ. ನಾಗರಡ್ಡಿ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಸಮಾಜಕ್ಕೆ ಅಗತ್ಯವಿರುವ ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವತ್ತ ಸಾಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ವಿಶ್ರಾಂತ ಡಿಡಿಪಿಐ ಎಂ.ಜಿ. ದಾಸರ ಮಾತನಾಡಿ, ಕತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯಿಂದ ಪರೀಕ್ಷೆಗಳನ್ನು ವೇಗವಾಗಿ ನಡೆಸಬಹುದು. 3ಡಿ ಪ್ರಿಂಟರ್, ಸ್ಮಾರ್ಟ್ ಟ್ರೈನ್ ಡಿಟೆಕ್ಟರ್, ಬೋಟ್ ಹಾಗೂ ಡ್ರೋನ್ ತಂತ್ರಜ್ಞಾನಗಳು ಮುಂಬರುವ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿವೆ ಎಂದರು.
ಅಧ್ಯಕ್ಷೆ ಸವಿತಾ ಅರಳಿಕಟ್ಟಿ, ಕಾರ್ಯದರ್ಶಿ ವಿನಾಯಕ ಅರಳಿಕಟ್ಟಿ, ಬಿಲ್ ಮೆಮೋರಿಯಲ್ ಅಧ್ಯಕ್ಷ ಎ.ಎಸ್. ಯಾದವಾಡ, ಡಾ. ವೆಂಕಟೇಶ ಮಲಘಾಣ, ಡಾ. ಮೋಹನ ಬಿರಾದಾರ, ಡಾ. ಶಿವಾನಂದ ಅಂತಾಪುರ, ಡಾ. ಕಿರಣ ಹುಣಸಿಕಟ್ಟಿ, ಪ್ರಾಚಾರ್ಯ ಚಂದ್ರಶೇಖರ ನಾಗವಂದ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಅಧೀಕ್ಷಕ ಜಯರಾಜ ಕೆ., ಶಿವರಾಜ ಯಾದವಾಡ, ಹೊನ್ನ ಶಿಕ್ಷಣ ಸಂಸ್ಥೆ ನಿರ್ದೇಶಕ ಶಿವಕುಮಾರ, ಉಪ ಪ್ರಾಚಾರ್ಯ ಮಾರುತಿ ಪವಾರ್ ಇತರರಿದ್ದರು.