ಬೆಂಗಳೂರಿನ ಡೇ ಕೇರ್​ನಲ್ಲಿ ಕ್ರೌರ್ಯ; ಅಳುವ ಮಕ್ಕಳ ಬಾಯಿಗೆ ಟಾಯ್ಲೆಟ್ ಜೆಟ್ ಸ್ಪ್ರೇ ಹೊಡೆದು ಹಿಂಸೆ, ಐವರ ವಿರುದ್ಧ ಕೇಸ್..Bengaluru

 Toddlers Kept In Washing Horror At Bengaluru Daycare
Toddlers Kept In Washing Horror At Bengaluru Daycare
Published on

ಪ್ರಮುಖ ಮುಖ್ಯಾಂಶಗಳು

  • ಅಳುವ ಮಕ್ಕಳನ್ನು ಕ್ರೂರವಾಗಿ ನಡೆಸಿಕೊಳ್ಳುವ ಡೇ ಕೇರ್​ಗಳು
  • ವಾಷಿಂಗ್ ಮೆಷಿನ್ ಒಳಗಿಟ್ಟು, ಬಾತ್ ರೂಂನಲ್ಲಿ ಲಾಕ್ ಮಾಡುತ್ತಿದ್ದ ಆಯಾ
  • ಮಕ್ಕಳ ಮೇಲಿನ ದೌರ್ಜನ್ಯದ ದೃಶ್ಯ ವೈರಲ್, ಐವರ ವಿರುದ್ಧ ಎಫ್‌ಐಆರ್
ಬೆಂಗಳೂರು: ಡೇ ಕೇರ್​ವೊಂದರಲ್ಲಿ ಎರಡರಿಂದ ಮೂರು ವರ್ಷದೊಳಗಿನ ಮಕ್ಕಳನ್ನು ಕ್ರೂರವಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್​ ಆಗಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಅಳುವ ಮಕ್ಕಳನ್ನು
ವಾಷಿಂಗ್ ಮೆಷಿನ್‌ನ ಮೇಲೆ ಕೂರಿಸುವುದು, ಅವರ ಬಾಯಿಗೆ ಟಾಯ್ಲೆಟ್ ಜೆಟ್ ಸ್ಪ್ರೇ ಸಿಂಪಡಿಸುವುದು ಮತ್ತು ಸ್ನಾನಗೃಹಗಳಲ್ಲಿ ಬೀಗ ಹಾಕುವ ದೃಶ್ಯಗಳು ಕಂಡುಬಂದಿದೆ.
ಬೆಂಗಳೂರಿನ ಹೆಚ್‌ಎಎಲ್ ಕ್ಯಾಪ್‌ಜೆಮಿನಿ ಟೆಕ್ನಾಲಜಿ ಸರ್ವಿಸಸ್ ಕಚೇರಿಯ ಡೇ ಕೇರ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ, ಸದ್ಯ ಐವರು ಮಹಿಳಾ ಆರೈಕೆದಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜುಳಾ, ವಿಜಯಲಕ್ಷ್ಮಿ, ಬಿಂದು, ಸಿಂಧು. ಭವಾನಿ ಎಂದು ಆರೋಪಿಗಳನ್ನು ಗುರುತಿಸಲಾಗಿದೆ
ಡೇಕೇರ್​ಗಳಲ್ಲಿ ಏನಾಗುತ್ತಿದೆ?
ಪೋಷಕರು ನೆಮ್ಮದಿಯಿಂದ ಕೆಲಸ ಮಾಡಲಿ ಎಂದು ಡೇ ಕೇರ್​ಗಳನ್ನು ಆಯಾ ಕಂಪನಿಗಳು ಕಟ್ಟಿಕೊಂಡಿರುತ್ತದೆ. ಅಂತಹ ಕೇಂದ್ರದಲ್ಲಿ ಏನೂ ಅರಿಯದ ಕಂದಮ್ಮಗಳನ್ನು ಕ್ರೂರವಾಗಿ ನಡೆಸಿಕೊಂಡಿರುವುದು ಕಂಡ ನೆಟ್ಟಿಗರು ಮಾನವೀಯತೆ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಐವರ ವಿರುದ್ಧ ದೂರು

ಮಕ್ಕಳು ಜೋರಾಗಿ ಅತ್ತಾಗ ಅವರನ್ನು ಸಮಾಧಾನಪಡಿಸುವ ಬದಲು, ಫ್ರಂಟ್-ಲೋಡಿಂಗ್ ವಾಷಿಂಗ್ ಮೆಷಿನ್‌ನ ಡ್ರಮ್ ಮೇಲೆ ಕೂರಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಅವರ ಅಳುವನ್ನು ನಿಲ್ಲಿಸಲು ಶೌಚಾಲಯದ ಜೆಟ್ ಸ್ಪ್ರೇ ಬಳಸಿ ಬಲವಂತವಾಗಿ ಬಾಯಿಗೆ ನೀರು ಸಿಂಪಡಿಸಲಾಗುತ್ತಿತ್ತು.ಕತ್ತಲೆ ಬಾತ್ ರೂಂಗಳಲ್ಲಿ ಹಾಕಿ ಲಾಕ್ ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ.
ಮಕ್ಕಳ ಮೇಲೆ ನಡೆದಿರುವ ಈ ಭೀಕರ ದೌರ್ಜನ್ಯದ ದೃಶ್ಯಗಳು ಒಳಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿವೆ. ಇದನ್ನು ಕಂಡು ಆಘಾತಕ್ಕೊಳಗಾದ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದ್ದು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಮುಂದೆಯೂ ಪ್ರತ್ಯೇಕ ದೂರು ದಾಖಲಿಸಲಾಗಿದೆ.

ಸಂಸ್ಥೆ ಹೇಳಿದ್ದೇನು?

ಘಟನೆಗೆ ಸಂಬಂಧಿಸಿದಂತೆ ಕ್ಯಾಪ್‌ಜೆಮಿನಿ ಸಂಸ್ಥೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ನಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬದವರ ಆರೋಗ್ಯ, ಸುರಕ್ಷತೆ ಹಾಗೂ ಯೋಗಕ್ಷೇಮಕ್ಕೆ ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ಸತ್ಯಾಸತ್ಯತೆಯನ್ನು ಹೊರತರಲು ನೆರವಾಗುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನ ಕ್ಯಾಂಪಸ್‌ನಲ್ಲಿರುವ ಡೇಹಕೇರ್ ಸೌಲಭ್ಯವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ ಪ್ರಕಟಣೆಯಲ್ಲಿ ತಿಳಿಸಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net