ಮೂಂದೂಡಿದ ಇಂದಿನ ಪ್ರತಿಭಟನೆ

ಯಾದಗಿರಿ ಎಸ್‌ಪಿ ಕಚೇರಿಯಲ್ಲಿ ಬುಧವಾರ ಸರ್ವ ಸಂಘಟನೆಗಳ ಸಮಿತಿ ಪದಾಧಿಕಾರಿಗಳೊಂದಿಗೆ ಎಸ್‌ಪಿ ಪೃಥ್ವಿಕ್ ಶಂಕರ್ ಸಭೆ ನಡೆಸಿದರು. ಮಾರೆಪ್ಪ ನಾಯಕ, ರವಿ ಕೆ.ಮುದ್ನಾಳ, ಅಶೋಕ ಐಕೂರ, ಎಂ.ಡಿ,ತಾಜಾ, ಸೈದಪ್ಪ ಕೂಲುರಕರ್, ರಾಜಶೇಖರ ಎದುರುಮನಿ, ನಿಜಲಿಂಗಪ್ಪ ಪೂಜಾರಿ, ಸಿದ್ದು ಪಾಟೀಲ್ ತಂಗಡಗಿ, ಶಿವರಾಜ ದಾಸನಕೇರಿ, ರುದ್ರಾಂಭೀಕ ಪಾಟೀಲ್ ಇತರರಿದ್ದರು.
ಯಾದಗಿರಿ ಎಸ್‌ಪಿ ಕಚೇರಿಯಲ್ಲಿ ಬುಧವಾರ ಸರ್ವ ಸಂಘಟನೆಗಳ ಸಮಿತಿ ಪದಾಧಿಕಾರಿಗಳೊಂದಿಗೆ ಎಸ್‌ಪಿ ಪೃಥ್ವಿಕ್ ಶಂಕರ್ ಸಭೆ ನಡೆಸಿದರು. ಮಾರೆಪ್ಪ ನಾಯಕ, ರವಿ ಕೆ.ಮುದ್ನಾಳ, ಅಶೋಕ ಐಕೂರ, ಎಂ.ಡಿ,ತಾಜಾ, ಸೈದಪ್ಪ ಕೂಲುರಕರ್, ರಾಜಶೇಖರ ಎದುರುಮನಿ, ನಿಜಲಿಂಗಪ್ಪ ಪೂಜಾರಿ, ಸಿದ್ದು ಪಾಟೀಲ್ ತಂಗಡಗಿ, ಶಿವರಾಜ ದಾಸನಕೇರಿ, ರುದ್ರಾಂಭೀಕ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹೇಳಿಕೆ
  • ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಯೊಂದಿಗೆ ಸಭೆ
ಯಾದಗಿರಿ: ಗಿರಿ ಜಿಲ್ಲೆಯನ್ನು ಬರಪೀಡಿತ ಘೋಷಣೆ ಮಾಡುವಂತೆ ಆಗ್ರಹಿಸಿ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಸರ್ವ ಸಂಘಟನೆಗಳ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೊರ ತಿಳಿಸಿದ್ದಾರೆ.
ಪ್ರತಿಭಟನೆ ಸುದ್ದಿ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಪೃಥ್ವಿಕ್ ಶಂಕರ್ ಅವರು ಸರ್ವ ಸಂಘಟನೆಗಳ ಸಮಿತಿ ಪದಾಽಕಾರಿಗಳೊಂದಿಗೆ ಬುಧವಾರ ಸಂಜೆ ಕರೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರಿಂದ ನಮ್ಮ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಹತ್ತು ದಿನಗಳ ಹಿಂದೆ ಜಿಲ್ಲೆಯನ್ನು ಬರಪೀಡತ ಘೋಷಣೆ ಮಾಡುವಂತೆ ಸಮಿತಿ ಪದಾಽಕಾರಿಗಳು ಯಾದಗಿರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ನಂತರ ಸಚಿವರು ಜಿಲ್ಲೆಗೆ ಆಗಮಿಸಿದ್ದ ವೇಳೆ ಮನವಿ ಸಲ್ಲಿಸಿ ಬೇಡಿಕೆ ಆಗ್ರಹಿಸಿದ್ದರು. ಈ ವೇಳೆ ಬುಧವಾರದೊಳಗಾಗಿ ಬರಪೀಡಿತ ಜಿಲ್ಲೆ ಘೋಷಣೆ ಮಾಡದಿದ್ದರೆ ಗುರುವಾರ ಕಲ್ಯಾಣ ಕರ್ನಾಟಕ ವಿಮೋಚನಾ ದಿನದಂದ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುವುದಾಗಿ ಹೇಳಲಾಗಿತ್ತು. ಅದರಂತೆ ೧೬ಸಂಜೆಯವರೆಗೂ ಸರ್ಕಾರ ಈ ಬಗ್ಗೆ ಯಾವುದೇ ಮಾಹಿತಿ ನೀಡದ ಕಾರಣ, ಸಮಿತಿ ಪದಾಽಕಾರಿಗಳು ಗುರುವಾರದ ಹೋರಾಟಕ್ಕೆ ಸಜ್ಜಾಗಿದ್ದರು.
ಇದನ್ನು ಅರಿತ ಎಸ್‌ಪಿ ಪೃಥ್ವಿಕ್ ಶಂಕರ್ ಬುಧವಾರ ಸಂಜೆ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಮನವೊಲಿಸಿ ಹೋರಾಟ ಹಿಂದಕ್ಕೆ ಪಡೆಯವಂತೆ ಹೇಳಿದರು. ಆದರೆ ಬೇಡಿಕೆ ಈಡೇರಿಲ್ಲ, ಹೀಗಾಗಿ ನಾವು ಮುಂದೆ ಹೇಳಿದಂತೆ ಹೋರಾಟ ಮಾಡುವುದಾಗಿ ಪಟ್ಟು ಹಿಡಿದಾಗ ಆಗ ಮಾತನಾಡಿದ ಎಸ್‌ಪಿ ಅವರು, ನಾಳೆ ಸಚಿವರಿಗೆ ನಿಮ್ಮನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ ನಂತರ ಹೋರಾಟ ಮುಂದೂಡಲಾಗಿದೆ ಎಂದು ಅವರು ತಿಳಿಸಿದರು.
ಪದಾಽಕಾರಿಗಳಾದ ಮಾರೆಪ್ಪ ನಾಯಕ, ರವಿ ಕೆ.ಮುದ್ನಾಳ, ಅಶೋಕ ಐಕೂರ, ಎಂ.ಡಿ,ತಾಜಾ, ಸೈದಪ್ಪ ಕೂಲುರಕರ್, ರಾಜಶೇಖರ ಎದುರುಮನಿ, ನಿಜಲಿಂಗಪ್ಪ ಪೂಜಾರಿ, ಸಿದ್ದು ಪಾಟೀಲ್ ತಂಗಡಗಿ, ಶಿವರಾಜ ದಾಸನಕೇರಿ, ರುದ್ರಾಂಭೀಕ ಪಾಟೀಲ್, ಅಜಯ ಮಾಸನ್, ಭೀಮು ಪೂಜಾರಿ, ವೀರೇಶ ಸಜ್ಜನ, ಬಸ್ಸುಗೌಡ ಚಟ್ಟನಳ್ಳಿ, ಶಂಕರ ಸೋನಾರ ಇತರರಿದ್ದರು.
"

ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಸಚಿವರು ಗುರುವಾರ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಮಿತಿ ಹೋರಾಟಗಾರರನ್ನು ಭೇಟಿ ಮಾಡಿ ಬೇಡಿಕೆ ಬಗ್ಗೆ ಚರ್ಚೆ ಮಾಡಲು ಅನುವು ಮಾಡಿಕೊಡಲಾಗುವುದು. ಈ ಬಗ್ಗೆ ಅವರೊಂದಿಗೆ ಸಭೆ ನಡೆಸಿ ಮನವೊಲಿಸಲಾಗಿದೆ.| ಪೃಥ್ವಿಕ್ ಶಂಕರಎಸ್‌ಪಿ ಯಾದಗಿರಿ

ಸಚಿವ ಡಾ.ಪಾಟೀಲ್‌ರಿಂದ ಧ್ವಜಾರೋಹಣ
ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ರಾಷ್ಟ ಧ್ವಜಾರೋಹಣ ಕಾರ್ಯಕ್ರಮವನ್ನು ಗುರುವಾರ ಬೆಳಗ್ಗೆ ೯ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲï ಧ್ವಜÁರೋಹಣ ನೆರವೇರಿಸಲಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಸೇರಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂ ಭಾಗವಹಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net