ತಂಬಾಕು ಬ್ಯಾರನ್‌ಗೆ ಬೆಂಕಿ ಬಿದ್ದು ನಷ್ಟ

ಕಡುವಿನ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ತಂಬಾಕು ಬ್ಯಾರನ್ ಮನೆ ಸುಟ್ಟು ಅಪಾರ ಹಾನಿ ಉಂಟಾಗಿದೆ.
ಕಡುವಿನ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ತಂಬಾಕು ಬ್ಯಾರನ್ ಮನೆ ಸುಟ್ಟು ಅಪಾರ ಹಾನಿ ಉಂಟಾಗಿದೆ.
Published on
ಅರಕಲಗೂಡು: ತಾಲೂಕಿನ ಕಡುವಿನ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ತಂಬಾಕು ಬ್ಯಾರನ್ ಮನೆ ಸುಟ್ಟು ಅಪಾರ ಹಾನಿ ಉಂಟಾಗಿದೆ.

ರೈತ ಪುಟ್ಟೇಗೌಡ ಅವರಿಗೆ ಸೇರಿದ ಬ್ಯಾರನ್ ಮನೆಯಲ್ಲಿ ಹೊಗೆಸೊಪ್ಪು ಹದಗೊಳಿಸುವ ವೇಳೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಬ್ಯಾರನ್‌ನಲ್ಲಿದ್ದ ತಂಬಾಕು ಹಾಗೂ ಮನೆಯಲ್ಲಿದ್ದ ಮರಮುಟ್ಟು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸಂಬಂಧಿಸಿದವರು ಸ್ಥಳಕ್ಕೆ ಭೇಟಿ ನೀಡಿ ನಷ್ಟಕ್ಕೊಳಗಾದ ರೈತನಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ಗೌಡ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net