ಕೆರೆ ಕಾಮಗಾರಿ ಕುಂಟಿತಕ್ಕೆ ಬೇಸರ lake

ಕೆರೆ ಕಾಮಗಾರಿ ಕುಂಟಿತಕ್ಕೆ ಬೇಸರ lake
ಕೆರೆ ಕಾಮಗಾರಿ ಕುಂಟಿತಕ್ಕೆ ಬೇಸರ lake
Published on

ಪ್ರಮುಖ ಮುಖ್ಯಾಂಶಗಳು

  • ಸ್ಥಳ ಪರಿಶೀಲಿಸಿದ ಕಾಂಗ್ರೆಸ್​ ಕಿಸಾನ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರಳಿಗೌಡ ಹೇಳಿಕೆ
ಕದರೀಪುರ: ಸೀತಿ ಹೊಸೂರು ಮತ್ತು ಬೈರಂಡಹಳ್ಳಿ ಕೆರೆ ಕಟ್ಟೆ ಅಭಿವೃದ್ಧಿ ನೆಪದಲ್ಲಿ ಕೆರೆ ದಂಡೆಯಲ್ಲಿದ್ದ ಮರಗಳನ್ನು ಗುತ್ತಿಗೆದಾರರು ಕತ್ತರಿಸಿ, ತೆರವು ಮಾಡಿ ಸಾಗಣೆ ಮಾಡಿದ್ದು, ಅರಣ್ಯ ಇಲಾಖೆ ಅಥವಾ ಸಂಬಂಧಿಸಿದ ಇಲಾಖೆ ಅನುಮತಿಯನ್ನೂ ಪಡೆದಿಲ್ಲ ಎಂದು ಕಾಂಗ್ರೆಸ್​ ಕಿಸಾನ ಜಿಲ್ಲಾಧ್ಯಕ್ಷ ಸೀತಿ ಹೊಸೂರು ಮುರಳಿಗೌಡ ಆರೋಪಿಸಿದರು.lake
ಬುಧವಾರ ಕೆರೆ ಕಾಮಗಾರಿ ಜಾಗಕ್ಕೆ ಭೇಟಿ ನೀಡಿದ ಅವರು ಕಾಮಗಾರಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 3.25 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಳಿಸಲಾಗುತ್ತಿದ್ದು, ಈ ಅನುದಾನದಲ್ಲಿ ಈಗಾಗಲೇ 75 ಲಕ್ಷ ರೂ. ಕಾಮಗಾರಿ ನಡೆದಿದೆ ಎಂದು ಗುತ್ತಿಗೆದಾರ ಹೇಳಿದ್ದಾರೆ. ಆದರೆ ಇದರಲ್ಲಿ ಇದುವರೆಗೂ 25 ಲ ರೂ. ಕೆಲಸ ಆಗಿರಬಹುದು. ವರ್ಕ್​ ಆರ್ಡರ್​ ನೀಡಿದಲ್ಲಿ ಗೊತ್ತಾಗುತ್ತದೆ. ಕೆರೆ ಕಟ್ಟೆ ಮೇಲಿನ ಜಾಲಿ ಮರಗಳು ತೆರವು, 25 ಲೋಡ್​ನಷ್ಟು ಮರಗಳ ಹೇಗೆ ನಾಪತ್ತೆಯಾದವು ಎಂದು ಪ್ರಶ್ನಿಸಿದರು.
ಪ್ರತಿ ಕಾರ್ಯಕ್ರಮದಲ್ಲೂ ಶಾಸಕರು ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ. ವೇಮಗಲ್​& ಸೀತಿ ಮುಖ್ಯರಸ್ತೆ ದ್ವಿಪಥ ಮಾಡಲು ಪೂಜೆ ನೆರವೇರಿಸಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ. ಸೀತಿ ಹೊಸೂರು ಬೈರಂಡಹಳ್ಳಿ ರಸ್ತೆ ಮತ್ತು ಕೆರೆ ಅಭಿವೃದ್ಧಿ ಕಾಮಗಾರಿಗೆ ಒಂದೇ ದಿನ ಚಾಲನೆ ನೀಡಿದ್ದರೂ ಒಂದು ಕಲ್ಲು ಸಹ ಪಕ್ಕಕ್ಕೆ ಸರಿದಿಲ್ಲ. ಎತ್ತ ಸಾಗಿದೆ ಶಾಸಕರ ಅಭಿವೃದ್ಧಿ ಕೆಲಸಗಳು? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹರಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಕುರಿತು ವಿವರಣೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. 2025ರ ಮಾ.31ರಂದು ಕೆರೆ ಕಾಮಗಾರಿ ಆರಂಭವಾಗಿದ್ದು, ಡಿಸೆಂಬರ್​ಗೆ ಮುಕ್ತಾಯವಾಗಬೇಕಿತ್ತು ಕಾರಣಾಂತರಗಳಿಂದ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಕೆರೆಗಳ ಮೇಲೆ ಬೆಳೆದ ಜಾಲಿ ಮರಗಳನ್ನು ಜಂಗಲ್​ ಎನ್ನುತ್ತಾರೆ ಇದನ್ನು ಕಡಿಯಲು ಅನುಮತಿ ಬೇಕಾಗುವುದಿಲ್ಲ. ಇದು ತನ್ನಷ್ಟಕ್ಕೆ ತಾನೆ ಬೆಳೆಯುತ್ತದೆ. ಯಾರು ಬೆಳೆಸುವುದಿಲ್ಲ ಎಂದು ವಿವರಣೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net