ಉದ್ದೇಶಿತ ಉದ್ಯಾನವನದಲ್ಲಿ ಅತ್ಯಾಧುನಿಕ ಶೈಲಿಯ ವಾಯುವಿಹಾರ ಪಥಗಳು, ಅಪರೂಪದ ವೃಕ್ಷಗಳು ಹಾಗೂ ಹೂವಿನ ಗಿಡಗಳು ಇರಲಿದ್ದು, ಸುಂದರ ಹುಲ್ಲುಗಾವಲು, ಸಾರ್ವಜನಿಕರ ಆಸನಗಳು ಇರಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರಲ್ಲದೆ, ಈ ಉದ್ಯಾನವನದಲ್ಲಿನ ಕೊಳವನ್ನು ಸುಂದರ ಸರೋವರವಾಗಿ ರೂಪಿಸಲಾಗುವುದು ಎಂದು ಸಚಿವರು ಹೇಳಿದರು.