ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮೂರು ತಿಂಗಳ ಟ್ಯೂಷನ್

ಹುಣಸೂರು ತಾಲೂಕು ಹೊಸರಾಮನಹಳ್ಳಿಯ ಮಂಜುನಾಥ ಪ್ರೌಢಶಾಲೆಯಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ ಟ್ಯೂಷನ್ ಕ್ಲಾಸ್‌ಗೆ ಯೋಜನಾಧಿಕಾರಿ ಶುಭಾದೇವಿ ಚಾಲನೆ ನೀಡಿ ಮಾತನಾಡಿದರು. ಮುಖ್ಯಶಿಕ್ಷಕ ಅಶ್ವತ್ಥ್ ಕುಮಾರ್,  ಶೈಲಜಾ, ಕಿರಣ್ ಕುಮಾರ್, ಮೀನಾಕ್ಷಿ ಇತರರು ಇದ್ದರು.
ಹುಣಸೂರು ತಾಲೂಕು ಹೊಸರಾಮನಹಳ್ಳಿಯ ಮಂಜುನಾಥ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ ಟ್ಯೂಷನ್ ಕ್ಲಾಸ್‌ಗೆ ಯೋಜನಾಧಿಕಾರಿ ಶುಭಾದೇವಿ ಚಾಲನೆ ನೀಡಿ ಮಾತನಾಡಿದರು. ಮುಖ್ಯಶಿಕ್ಷಕ ಅಶ್ವತ್ಥ್ ಕುಮಾರ್, ಶೈಲಜಾ, ಕಿರಣ್ ಕುಮಾರ್, ಮೀನಾಕ್ಷಿ ಇತರರು ಇದ್ದರು.
Published on
ಹುಣಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಆಯ್ದ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ಟ್ಯೂಷನ್ ಕ್ಲಾಸ್ ಆಯೋಜಿಸಲಾಗುವುದು ಎಂದು ಯೋಜನೆ ತಾಲೂಕು ಯೋಜನಾಧಿಕಾರಿ ಶುಭಾದೇವಿ ತಿಳಿಸಿದರು.

ತಾಲೂಕಿನ ಬಿಳಿಕೆರೆ ಹೋಬಳಿ ಹೊಸರಾಮನಹಳ್ಳಿಯ ಶ್ರೀ ಮಂಜುನಾಥ ಪ್ರೌಢಶಾಲೆಯಲ್ಲಿ ಬುಧವಾರ ಟ್ಯೂಷನ್ ಕ್ಲಾಸ್‌ಗಳಿಗೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಅವರ ನಿರ್ದೇಶನದಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ರೂಪಿಸಲಾಗಿದೆ. ಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ವಿಷಯಗಳಿಗೆ ಅದೇ ಗ್ರಾಮದ ನಿರುದ್ಯೋಗಿ ಶಿಕ್ಷಣ ಪದವೀಧರರು ಅಥವಾ ಹಾಲಿ ಇರುವ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿ ಮೂರು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುವುದು. ಆಯ್ಕೆಯಾದ ಶಿಕ್ಷಕರಿಗೆ ಯೋಜನೆ ವತಿಯಿಂದ ಗೌರವಧನ ನೀಡಲಾಗುವುದು ಎಂದರು.

ಈ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 9 ಶಾಲೆಗಳನ್ನು ಆಯ್ಕೆಮಾಡಿಕೊಳ್ಳಲು ಸೂಚನೆ ಇದ್ದು, ಈಗಾಗಲೇ ಎಲ್ಲ 9 ಶಾಲೆಗಳಲ್ಲೂ ಟ್ಯೂಷನ್‌ಕ್ಲಾಸ್ ಆರಂಭಗೊಂಡಿವೆ. ಯೋಜನೆ ಜಾರಿಗೊಂಡಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಾಠ, ಪ್ರವಚನಗಳಲ್ಲಿ ಗಮನವಿಟ್ಟು ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಪಡೆಯಬೇಕು. ಅಲ್ಲದೆ ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಮಟ್ಟಕ್ಕೇರಬೇಕು ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಅಶ್ವತ್ಥ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೈಲಜಾ, ಯೋಜನೆ ಮೇಲ್ವಿಚಾರಕ ಕಿರಣ್ ಕುಮಾರ್ , ಸೇವಾಪ್ರತಿನಿಧಿ ಮೀನಾಕ್ಷಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net