ಹಾಲಿನ ಮೂರು ಬಿಲ್​ ಪಾವತಿಯಾಗಿಲ್ಲ / NELAMANGAL

ನೆಲಮಂಗಲ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಣ್ಣೆಗೆರೆ ಹಾಲು ಉತ್ಪಾದಕರ ಸಂಘದ ಮಹಿಳಾ ಸದಸ್ಯೆಯರು ಗ್ರಾಮದ ಸಮಸ್ಯೆ ಕುರಿತು ಶಾಸಕ ಎನ್​.ಶ್ರೀನಿವಾಸ್​ ಅವರಿಗೆ ಮನವರಿಕೆ ಮಾಡಿಕೊಟ್ಟರು. ತಹಸೀಲ್ದಾರ್​ ಮಲ್ಲೇಶ್​ ಬಿ. ಪೂಜಾರ್​, ಶಿರಸ್ತೇದಾರ್​ ವಿಮಲಾ ಇದ್ದರು.
ನೆಲಮಂಗಲ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಣ್ಣೆಗೆರೆ ಹಾಲು ಉತ್ಪಾದಕರ ಸಂಘದ ಮಹಿಳಾ ಸದಸ್ಯೆಯರು ಗ್ರಾಮದ ಸಮಸ್ಯೆ ಕುರಿತು ಶಾಸಕ ಎನ್​.ಶ್ರೀನಿವಾಸ್​ ಅವರಿಗೆ ಮನವರಿಕೆ ಮಾಡಿಕೊಟ್ಟರು. ತಹಸೀಲ್ದಾರ್​ ಮಲ್ಲೇಶ್​ ಬಿ. ಪೂಜಾರ್​, ಶಿರಸ್ತೇದಾರ್​ ವಿಮಲಾ ಇದ್ದರು.
Published on
ನೆಲಮಂಗಲ : ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲ ಗ್ರಾಮಗಳ ಜನರು ಹಾಗೂ ರೈತರ ಹಿತ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಎನ್​. ಶ್ರೀನಿವಾಸ್​ ಅಭಯ ನೀಡಿದರು.
ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಸದಸ್ಯರ ಹಾಲಿನ ಮೂರು ಬಿಲ್​ ಪಾವತಿಯಾಗಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಿಲ್​ ಕೊಡಿಸುವಂತೆ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಣ್ಣೆಗೆರೆ ಹಾಲು ಉತ್ಪಾದಕರ ಸಂಘದ ಮಹಿಳಾ ಸದಸ್ಯೆಯರು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಕರೆ ಮಾಡಿ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದ ಮಾಹಿತಿ ಪಡೆದುಕೊಂಡರು. ಕೂಡಲೇ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶ್ರೀ ರೈತರ ಹಾಲಿನ ಹಣ ನೀಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.
ಒತ್ತುವರಿ ಆರೋಪ: ಸೋಂಪುರ ಹೋಬಳಿಯ ದಾಸೇನಹಳ್ಳಿಯಲ್ಲಿ ಮಹಿಳೆಯೊಬ್ಬರು ತನ್ನ ದಾಖಲೆಯಲ್ಲಿ ಇರುವ ಜಾಗಕ್ಕೂ ಮೀರಿ ಗ್ರಾಮದ ಬಸವಣ್ಣ ದೇವಾಲಯದ ಅಗ್ನಿಕುಂಡದ ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.
ಅಗ್ನಿಕುಂಡ ಜಾಗಬಿಟ್ಟು ಉಳಿದ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಗ್ರಾಮಸ್ಥರ ವಿರೋಧವಿಲ್ಲ. ಮನೆ ನಿಮಾರ್ಣದ ಆರಂಭದಿಂದಲೂ ಗ್ರಾಮಸ್ಥರ ಮನವಿಗೆ ಗ್ರಾಮದ ಮಹಿಳೆ ಸ್ಪಂದಿಸಿಲ್ಲ. ಪಿಡಿಒ ನೋಟಿಸ್​ ನೀಡಿದ್ದರೂ ಕ್ಯಾರೆ ಅಂದಿಲ್ಲ ಎಂದು ಶಾಸಕರಿಗೆ ಗ್ರಾಮಸ್ಥರು ಮನವರಿಕೆ ಮಾಡಿಕೊಟ್ಟರು.
ದಾಖಲೆಗಳನ್ನು ಪರಿಶೀಲಿಸಿ ಮನೆ ನಿರ್ಮಿಸಿಕೊಳ್ಳುವಂತೆ ತಿಳಿಸಲು ಸಂಬಂಧಪಟ್ಟ ಪಿಡಿಒಗೆ ಸೂಚಿಸಲಾಗುವುದು. ಜತೆಗೆ ಗ್ರಾಮದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸಹಕಾರ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net