ಚಿಂತಾಮಣಿ: ವಿಪಿ ಪ್ಯಾಲೇಸ್ ಬಳಿ 2 ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ತಪತೇಶ್ವರ ಕಾಲನಿ ನಿವಾಸಿ ಮನೋಜ್ ತೇಜ್, ಊಲವಾಡಿ ಗ್ರಾಮದ ಸಂಜಯ್ ಗಂಭೀರ ಗಾಯಗೊಂಡಿದ್ದು, ಕೆ.ಕುರ್ರಪಲ್ಲಿಯ ಅರುಣ್ ಕುಮಾರ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜೂ.4ರಂದು ಸಂಜೆ 5.45ಕ್ಕೆ ಸಂಜಯ್ ಹಾಗೂ ಮನೋಜ್ ತೇಜ್ ಬೈಕ್ನಲ್ಲಿ ಚಿಂತಾಮಣಿ&ಶ್ರೀನಿವಾಸಪುರ ರಸ್ತೆಯ ಮಾಡಿಕೆರೆ ಕ್ರಾಸ್ನಲ್ಲಿರುವ ಪೆಟ್ರೋಲ್ ಬಂಕ್ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳಿಯರು ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಮನೋಜ್ ತೇಜ್ ಸ್ಥಿತಿ ಗಂಭೀರವಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೋಜ್ ತೇಜ್ ತಂದೆ ರಘು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.