ಸ್ಮಶಾನದಲ್ಲಿ ಶವಗಳ ಎಲುಬು ಹೊರತೆಗೆದು ಸಾಗಿಸುತ್ತಿದ್ದ ಆರೋಪ; ಮೂವರ ಬಂಧನ..Raichur

ಸ್ಮಶಾನದಲ್ಲಿ ಶವಗಳ ಎಲುಬು ಹೊರತೆಗೆದು ಸಾಗಿಸುತ್ತಿದ್ದ ಆರೋಪ; ಮೂವರ ಬಂಧನ..Raichur
Published on: 
  • ಸ್ಮಶಾನದಲ್ಲಿ ಶವಗಳ ಎಲುಬು ಕದಿಯುತ್ತಿದ್ದ ಆರೋಪ

  • ಸ್ಮಶಾನದಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ತಳವಾರ ಹನುಮಯ್ಯನಿಂದ ಕೃತ್ಯ

  • ಎಲುಬು ಸಾಗಿಸುತ್ತಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ ಕಾಲೇಜು ಸಿಬ್ಬಂದಿ ಬಂಧನ

ರಾಯಚೂರು: ನಗರದ ಮಾರುತಿ ಬಡಾವಣೆಯ ಸ್ಮಶಾನದಲ್ಲಿ ಹೂತುಹಾಕಿದ್ದ ಶವಗಳ ದೇಹದ ಭಾಗಗಳು ಹಾಗೂ ಎಲುಬುಗಳನ್ನು ಅನಧಿಕೃತವಾಗಿ ಹೊರತೆಗೆದು ಸಾಗಿಸುತ್ತಿದ್ದ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪದ ಮೇಲೆ ಮೂರು ಜನರನ್ನು ಶನಿವಾರ ನೇತಾಜಿನಗರ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸ್ಮಶಾನದಲ್ಲಿ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ತಳವಾರ ಹನುಮಯ್ಯ ಎಂಬಾತ, ಹೂತುಹಾಕಿದ ಶವಗಳನ್ನು ಹೊರತೆಗೆದು ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಲಾದ ನವೋದಯ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರಾಜು ಮತ್ತು ಅಫ್ಸರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Also Read
ಸ್ಮಶಾನ ಜಾಗ ಒತ್ತುವರಿ ತೆರವು
ಸ್ಮಶಾನದಲ್ಲಿ ಶವಗಳ ಎಲುಬು ಹೊರತೆಗೆದು ಸಾಗಿಸುತ್ತಿದ್ದ ಆರೋಪ; ಮೂವರ ಬಂಧನ..Raichur

ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಶವವೊಂದರ ಎಲುಬು ಹಾಗೂ ದೇಹದ ಇತರೆ ಭಾಗಗಳನ್ನು ವಾಹನದಲ್ಲಿ ಸಾಗಿಸುತ್ತಿರುವುದು ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸಂಶೋಧನಾ ಉದ್ದೇಶಕ್ಕಾಗಿ ಮೃತದೇಹದ ಭಾಗಗಳನ್ನು ಈ ರೀತಿಯಾಗಿ ಅನಧಿಕೃತವಾಗಿ ಬಳಸಿಕೊಳ್ಳುತ್ತಿರಬಹುದು ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ, (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net