ಕೊಲೆಗೆ ಸಂಚು ರೂಪಿಸಿದ್ದ ಮೂವರ ಬಂಧನ

accused
accused
Published on

ಪ್ರಮುಖ ಮುಖ್ಯಾಂಶಗಳು

  • ಹಳೇ ದ್ವೇಷಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಕೃತ್ಯ ನಡೆಸಿದ್ದರು
  • ಸಂಚು ತಪ್ಪಿಸಿದ ಸಿಸಿಬಿ ಪೊಲೀಸರು, ತನಿಖೆ ಚುರುಕು

ಬೆಂಗಳೂರು:

ಭೈರಸಂದ್ರದ ರೌಡಿಶೀಟರ್ ಒಬ್ಬನ ಕೊಲೆಗೆ ಸಂಚು ರೂಪಿಸಿದ್ದ ಗ್ಯಾಂಗ್‌ವೊಂದನ್ನು ಪತ್ತೆ ಮಾಡಿದ ಸಿಸಿಬಿ (ಅಪರಾಧ ಸಂಘಟಿತ ದಳ) ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.

ಸಿದ್ದಾಪುರ ನಿವಾಸಿ ಶಿವ ಅಲಿಯಾಸ್ ಕಲ್ಕಿ (29), ಪೃಥ್ವಿರಾಜ್ (26), ಗಿರೀಶ್ (30) ಬಂಧಿತರು. ಇವರಿಂದ ಆರು ಮಚ್ಚುಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಆಟೋ ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.
ಈ ಹಿಂದೆ ಅಣ್ಣಮ್ಮ ಜಾತ್ರೆ ಸಂದರ್ಭದಲ್ಲಿ ರೌಡಿಶೀಟರ್ ಲಕ್ಷ್ಮೀ ನಾರಾಯಣ ಹಾಗೂ ಆರೋಪಿ ಶಿವ ಅಲಿಯಾಸ್ ಕಲ್ಕಿ ಮಧ್ಯೆ ಜಗಳ ಆಗಿರುತ್ತದೆ. ಇದನ್ನೇ ದ್ವೇಷ ಸಾಧಿಸಿಕೊಂಡಿದ್ದ ಆರೋಪಿ ಆತನನ್ನು ಹತ್ಯೆ ಮಾಡಿದರೆ, ಏರಿಯಾದಲ್ಲಿ ನಾನೇ ದೊಡ್ಡ ರೌಡಿ ಆಗಬಹುದು ಎಂದು ಸಂಚು ರೂಪಿಸಿದ್ದ.
ಆರೋಪಿಯು ತನಗೆ ದೊಡ್ಡ-ದೊಡ್ಡ ರೌಡಿಗಳ ಪರಿಚಯವಿದೆಯೆಂದು ಜನರಿಗೆ ಹೆದರಿಸಿಕೊಂಡು ಓಡಾಡುತ್ತಿದ್ದ. ಈ ಮಧ್ಯೆ ರೌಡಿಶೀಟರ್ ಕೊಲೆ ಮಾಡಬೇಕೆಂದು ಮಾರಕಾಸಗಳ ಸಮೇತ ಆಟೋದಲ್ಲಿ ಸುತ್ತಾಡುತ್ತಿದ್ದ. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಇನ್ನು ಅನೇಕರ ಪಾತ್ರವಿದ್ದು, ಅವರ ಬಂಧನಕ್ಕಾಗಿ ಶೋಧ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಶಿವ ಅಲಿಯಾಸ್ ಕಲ್ಕಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನು ದಕ್ಷಿಣ ಬೆಂಗಳೂರು ಭಾಗದ ಡಾನ್ ಆಗಬೇಕು, ಈ ಮೂಲಕ ಸೌತ್ ಶಿವ ಹೆಸರು ಪಡೆಯಬೇಕು ಎಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net