1 ರೂ.ಗೆ ಊಟ ಸೇವಿಸಿದ ಸಾವಿರಾರು ಜನರು:ಕಾರ್ಯಕ್ರಮಕ್ಕೆ ಮೆರಗು ತಂದ ನಟ ಗಿಲ್ಲಿ-Actor gilli

ಟಿ.ಎ.ಶರವಣ, ಬಿಗ್‌ಬಾಸ್-12ರ ವಿಜೇತ ನಟ ಗಿಲ್ಲಿ ಭಾಗಿ
ಟಿ.ಎ.ಶರವಣ, ಬಿಗ್‌ಬಾಸ್-12ರ ವಿಜೇತ ನಟ ಗಿಲ್ಲಿ ಭಾಗಿ
Published on
ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಹುಟ್ಟು ಹಬ್ಬ ಅಂಗವಾಗಿ ಹನುಮಂತನಗರದದ 50 ಅಡಿ ರಸ್ತೆಯಲ್ಲಿರುವ ‘ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್’ ನಲ್ಲಿ ಕೇವಲ 1 ರೂ.ಗೆ ಉಪಹಾರ, ಮುದ್ದೆ ಊಟವನ್ನು ವಿತರಿಸಲಾಯಿತು. ಸಾವಿರಾರು ಜನರು ಊಟ ಸೇವಿಸಿ ಖುಷಿಪಟ್ಟರು.
ಎಚ್‌ಡಿಡಿ ಅವರ ಕಟ್ಟಾ ಅಭಿಮಾನಿ, ಎಂಎಲ್ಸಿ ಟಿ.ಎ.ಶರವಣ ನೇತೃತ್ವದಲ್ಲಿ ಕೈಗೊಂಡಿದ್ದ ಕಾರ್ಯ ಮಾದರಿಯಾಯಿತು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಮತ್ತು ಆಟೋ ಚಾಲಕರಿಗೆ ಬಟ್ಟೆ ವಿತರಿಸಲಾಯಿತು. ಬಿಗ್‌ಬಾಸ್-12ರ ವಿಜೇತ ನಟ ಗಿಲ್ಲಿ ಆಗಮನವೂ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಗಿಲ್ಲಿ ನೋಡಲು ಸಾವಿರಾರು ಜನ ಸೇರಿದ್ದರು. ಹಲವು ಗಣ್ಯರು ಸಾಕ್ಷಿಯಾಗಿದ್ದರು.
ಹಸಿದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟ, ಉಪಹಾರ ಒದಗಿಸುವ ‘ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್’ ಅನ್ನು ಟಿ.ಎ.ಶರವಣ, ತಮ್ಮ ಸ್ವಂತ ಖರ್ಚಿನಲ್ಲಿ 9 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಬಸವನಗುಡಿ ಕ್ಷೇತ್ರದ ಹನುಮಂತನಗರದಲ್ಲಿ ಈ ಕ್ಯಾಂಟೀನ್, ಪ್ರತಿ ದಿನ ಸಾವಿರಾರು ಜನರಿಗೆ ಗುಣಮಟ್ಟದ,ಶುಚಿ, ರುಚಿಯಾದ ಊಟ, ಉಪಹಾರ ನೀಡುತ್ತಾ ಬರುತ್ತಿದೆ.
ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಕ್ಯಾಂಟೀನ್ ಸಹಕಾರಿಯಾಗಿತ್ತು. ಹಸಿದವರಿಗೆ ಅನ್ನ ಕೊಡಬೇಕು ಎಂಬುದು ದೇವೇಗೌಡ ಅವರ ಕನಸಾಗಿದೆ. ಅದನ್ನು ನನಸಾಗಿಸಲು ಅವರ ಅಭಿಮಾನಿ ಶರವಣ ಶ್ರಮಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net