ಹೌಸ್‌ನಲ್ಲಿ ಬಾಯಿ ಬಿಡದವರು ಮಂತ್ರಿ ಸ್ಥಾನ ಕೇಳ್ತಾರೆ

ಬಾಗಲಕೋಟೆ ನಗರದಲ್ಲಿ ಭಾನುವಾರ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿದರು. ದ್ಯಾಮಣ್ಣ ಗಾಳಿ, ಸರಸಿಂಹಯ್ಯ, ವೆಂಕಟೇಶ ನಾಯಕ್ ಮತ್ತಿತರರು ಇದ್ದರು.
ಬಾಗಲಕೋಟೆ ನಗರದಲ್ಲಿ ಭಾನುವಾರ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿದರು. ದ್ಯಾಮಣ್ಣ ಗಾಳಿ, ಸರಸಿಂಹಯ್ಯ, ವೆಂಕಟೇಶ ನಾಯಕ್ ಮತ್ತಿತರರು ಇದ್ದರು.
Published on
ಬಾಗಲಕೋಟೆ: ಎಂತವರು ಮಂತ್ರಿ ಆಗಬೇಕು ಎಂದು ರಾಮಾಯಣದಲ್ಲಿ ಉಲ್ಲೇಖ ಇದೆ. ಹೀಗಾಗಿ ಅವರು (ಪಕ್ಷದ ವರಿಷ್ಠರು) ರಾಮಾಯಣ ತೆಗೆದು ಅಯೋಧ್ಯಯ ಕಾಂಡ ೧೦೦ರಲ್ಲಿ ೮೭ ಶ್ಲೋಕ ಓದಿದರೆ ಗೊತ್ತಾಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕರು ಖಾತೆ ಕ್ಯಾತೆ ಹಾಗೂ ಸಚಿವ ಸ್ಥಾನದ ಲಾಬಿಗೆ ನಡೆಸಿರುವ ಲಾಬಿಗೆ ಸಂಬAಽಸಿದAತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಈ ಸಲಹೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಸಂಪುಟ ಸರ್ಕಸ್ ಬಗ್ಗೆ ಎದುರಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ ಅವರು, ಹೌಸ್‌ನಲ್ಲಿ ಬಾಯಿ ಬಿಡದವರು, ಶಾಸಕರಾದ ಕೂಡಲೇ ಸಚಿವ ಸ್ಥಾನ ಬೇಕು ಎನ್ನುತ್ತಾರೆ. ಬಹಳಷ್ಟು ಜನರಿಗೆ ಸಚಿವರಾಗಲು ಅರ್ಹತೆ ಇದೆಯೋ ಇಲ್ಲವೋ ಮತ್ತೊಂದು ಮಗದೊಂದು ಗೊತ್ತಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಇದು ಸಹಜ. ಜನಪ್ರತಿನಿಽಗಳು ತಮ್ಮ ಭಾವನೆಗಳನ್ನು ಪಕ್ಷದ ಮುಖಂಡರ ಮುಂದೆ ವ್ಯಕ್ತಪಡಿಸುತ್ತಾರೆ. ಅದು ಅವರ ಹಕ್ಕು. ಈ ಬಗ್ಗೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಅವರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.
ರಾಮಾಯಣದಲ್ಲಿ ಬರುತ್ತದೆ, ಹಲವರು ಭ್ರಷ್ಟರು, ಅರ್ಹತೆ ಇಲ್ಲದವರು ಮಂತ್ರಿ ಆಗುವುದಕ್ಕಿಂತ ನಾಲ್ಕಾರು ಜನರು ಉತ್ತಮರು, ದಕ್ಷರು ಮಂತ್ರಿಯಾದರೂ ರಾಜ್ಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಎಂದು. ಹೀಗಾಗಿ ಯಾರನ್ನೂ ಸಚಿವರನ್ನಾಗಿ ಮಾಡಬೇಕು ಎಂದು ರಾಮಾಯಣ ಓದಿ ತಿಳಿಯಲಿ ಎಂದು ಸಲಹೆ ನೀಡಿದರು.
ಸಿದ್ಧರಾಮಯ್ಯ ಅವರು ಈಗ ನಮ್ಮ ಪಕ್ಷದ ಸಿ ಡಬ್ಲೂ ಸಿಯಲ್ಲಿದ್ದಾರೆ. ಪಕ್ಷದ ಅತ್ಯುನ್ನತ ಸ್ಥಾನದಲ್ಲಿ ಇದ್ದಾರೆ. ಅವರಿಗೂ ಕೂಡ ಇದನ್ನು (ಸಂಪುಟ ರಚನೆಯ ಕಸರತ್ತು) ಸರಿ ಮಾಡುವ ಜವಾಬ್ದಾರಿ ಇದೆ. ಹಾಗೆಯೇ ಎಐಸಿಸಿ ಅಧ್ಯಕ್ಷರಾಗಿ ನಮ್ಮ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಹೀಗಾಗಿ ಅದನ್ನೆಲ್ಲ ಸರಿಪಡಿಸುತ್ತಾರೆ ಎಂದರು.
ಮAತ್ರಿಗಳು ಆಗುವವರು ಸಮಗ್ರ ರಾಜ್ಯವನ್ನು ಕಾಪಾಡುವಂತವರು, ಸಂವಿಧಾನ ಕಾಪಾಡುವವರು, ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು, ಈ ರಾಜ್ಯದ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಎಲ್ಲ ವರ್ಗದ ಜನರ ದುಃಖ ದುಮ್ಮಾನಗಳನ್ನು ಅರ್ಥ ಮಾಡಿಕೊಂಡವರನ್ನು ಮಂತ್ರಿ ಮಂಡಲದಲ್ಲಿ ತಂದರೆ ರಾಜ್ಯ ಸರ್ವತೋಮುಖ ಅಭಿವೃದ್ಧಿ ಆಗಲು ಸಾಧ್ಯ. ಈ ದಿಕ್ಕಿನಲ್ಲಿ ನಮ್ಮ ಹೈಕಮಾಂಡ್ ಗಮನ ಹರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಗವಾನ್ ವಿರುದ್ಧ ಉಗ್ರರಾದ ಉಗ್ರಪ್ಪ
ಈಚೆಗೆ ಮಹಿರ್ಷಿ ವಾಲ್ಮೀಕಿ ರಾಮಾಯಣದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂದು ಕೆ.ಎಸ್.ಭಗವಾನ್ ವಿರುದ್ಧ ಉಗ್ರಪ್ಪ ಅವರು ಉಗ್ರರಾದರು.
ಈ ಭಗವಾನ್‌ಗೆ ವಯಸ್ಸಿನ ಕಾರಣವೋ ಅಥವಾ ತಿಕ್ಕಲತನವೋ ಗೊತ್ತಾಗುತ್ತಿಲ್ಲ. ಅವರು ಬಾಯಿಗೆ ಬಂದAತೆ ಏನೇನೋ ಮಾನಾಡುತ್ತಾರೆ. ನಾನು ಅನೇಕ ಸಲ ಅವರ ಮಾತನ್ನು ನಿರ್ಲಕ್ಷ್ಯ ಮಾಡಬೇಕು ಎನ್ನುತ್ತೇನೆ. ಆದರೆ, ಇದೀಗ ಅವರು ವಾಲ್ಮೀಕಿ ರಾಮಾಯಣದ ಯಾವುದೋ ಒಂದು ಪ್ರಸಂಗ ಹೇಳಿ, ಕೆಟ್ಟದಾಗಿ ಮಾತನಾಡಿದ್ದಾರೆ. ಇವರಿಗೆ ರಾಮಾಯಣದ ಬಗ್ಗೆ ಅರಿವು ಇಲ್ಲ. ಅದನ್ನು ಸರಿಯಾಗಿ ಓದಿಲ್ಲ. ಹೆಸರು ಭಗವಾನ್ ಎಂದು ಇಟ್ಟುಕೊಂಡು ಏನೇನೋ ಹೇಳುತ್ತಾರೆ ಎಂದು ಕಿಡಿಕಾರಿದರು.
ಗಾಂಽÃಜಿ ಬಯಸಿದ್ದು ಗಾಂಽ ರಾಜ್ಯವಲ್ಲ, ಅವರು ರಾಮರಾಜ್ಯವನ್ನು. ಗಾಂಽÃಜಿಗಿAತ ದೊಡ್ಡ ಮನುಷ್ಯನಾ ನೀನು? ನಮ್ಮ ಸಮಾಜದ ಭಾವನೆಗೆ ಹಾಗೂ ರಾಮಾಯಣ ಆರಾಽಸುವ ಜನರ ಭಾವನೆಗಳಿಗೆ ಭಗವಾನ್ ದಕ್ಕೆ ತಂದಿದ್ದಾರೆ. ಹೀಗಾಗಿ ಕೂಡಲೇ ಅವರು ದೇಶದ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net