ಉಪಯೋಗಕ್ಕೆ ಬಾರದ ತೊಂಡೆಬಾವಿ ಬಸ್​ ತಂಗುದಾಣ

Thondebavi bus stand which is not in use
Thondebavi bus stand which is not in use
Published on
ತೊಂಡೆಬಾವಿ: ಜನರ ಅನುಕೂಲಕ್ಕಾಗಿ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸುವುದು ವಾಡಿಕೆ. ಒದಗಿಸುವ ಸೌಲಭ್ಯಗಳು ಸಾರ್ವಜನಿಕ ಉಪಯೋಗಕ್ಕೆ ಬರುವಂತಿರಬೇಕು. ಇಲ್ಲದಿದ್ದರೆ ಜನರಿಂದ ದೂರ ಸರಿಯುತ್ತವೆ. ಸರ್ಕಾರ ಜನರಿಗೆ ಕಲ್ಪಿಸುವ ಸೌಲಭ್ಯ ಪರಿಪೂರ್ಣಗೊಂಡಿದ್ದರೆ ಮಾತ್ರ ಬಳಕೆಯಾಗುತ್ತದೆ. ಇಲ್ಲದಿದ್ದರೆ ತುಕ್ಕು ಹಿಡಿಯುವುದು ಗ್ಯಾರಂಟಿ.
"

ಬೆಂಗಳೂರಿನಿಂದ ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಹಾಗೂ ಇತರ ಊರುಗಳಿಗೆ ಸಂಚರಿಸುವ ಬಸ್​ಗಳನ್ನು ಹೊಸ ಬಸ್​ ನಿಲ್ದಾಣದಲ್ಲಿ ನಿಲ್ಲಿಸಬೇಕು. ಆಗ ನಿಲ್ದಾಣ ಬಳಕೆಗೆ ಬರುತ್ತದೆ. ಇಲ್ಲದಿದ್ದರೆ ಇದೇ ಸ್ಥಿತಿ ಮುಂದುವರಿಯುವುದು. ಇದಕ್ಕೆ ಅಗತ್ಯ ಕ್ರಮವಹಿಸಲಾಗುವುದು.

> ಪೃಥ್ವಿಭಾ ಪಿಡಿಒ, ತೊಂಡೆಬಾವಿ,

ಹಾಳಾಗಿರುವುದಕ್ಕೆ ಪ್ರಮುಖ ಸಾ ತೊಂಡೆಬಾವಿ ರೈಲ್ವೆ ಬಳಿಯ ಸಾರಿಗೆ ಸಂಸ್ಥೆ ಬಸ್​ ನಿಲ್ದಾಣ...!
ತೊಂಡೆಬಾವಿಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಬಸ್​ ನಿಲ್ದಾಣ ನಿರ್ಮಿಸಿ ವರ್ಷಗಳೇ ಕಳೆದರೂ ಜನರ ಬಳಕೆಗೂ ಸಿಗದೆ ಪಾಳು ಬಿದ್ದಿದೆ. ಈ ಬಸ್​ ನಿಲ್ದಾಣದ ಶೆಲ್ಟರ್​ ಮೇಲೆ ಶೀಟ್​ಗಳನ್ನು ಹಾಕಿಲ್ಲ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಶಾಲೆ ವಿದ್ಯಾರ್ಥಿಗಳು ಓಡಾಡುತ್ತಾರೆ.
"

ಹೆಚ್ಚಿದ ವಾಹನ ದಟ್ಟಣೆ

ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚು. ಅದರಲ್ಲೂ ವಾರದ ಕೊನೆಯಲ್ಲಿ ವಾಹನಗಳು ಮತ್ತು ಜನ ದಟ್ಟಣೆ ತೀವ್ರವಾಗಿರುತ್ತದೆ. ಸರಿಯಾದ ಪಾರ್ಕಿಂಗ್​ ವ್ಯವಸ್ಥೆ ಇರುವುದಿಲ್ಲ. ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ತ್ವರಿತವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ.ತೊಂಡೆಬಾವಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ನಗರ ಪ್ರದೇಶಗಳಿಗೆ ತೆರಳುವವರಿಗೆ ಈ ಮಾರ್ಗ ಅನುಕೂಲವಾಗಿದೆ. ಆದರೆ, ಈ ಜಾಗದದಲ್ಲಿ ನಿಲ್ದಾಣವಿದೆ ಎಂಬುದೇ ತಿಳಿಯದಂತಾಗಿದೆ. ಹಾಗಾಗಿ ಜನರು ಬಸ್​ಗಳಿಗಾಗಿ ಕಾಯದೇ ಅನಿವಾರ್ಯವಾಗಿ ಅನ್ಯಮಾರ್ಗಗಳನ್ನು ಹಿಡಿಯಬೇಕಿದೆ.

ಪ್ರತಿ 3 ನಿಮಿಷಕ್ಕೊಮ್ಮೆ ಬಸ್​ಗಳು ಸಂಚರಿಸಲಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಕಬ್ಬಿಣದ ೋಲ್​ಗಳನ್ನು ನಿಲ್ಲಿಸಿ ಬಸ್​ ತಂಗುದಾಣ ನಿರ್ಮಾಣಕ್ಕೆ ಅಗತ್ಯವಾಗಿರುವ ಕೆಲಸ ಅರ್ಧಂರ್ಬಧ ನಡೆದಿದೆ. ಬಿಸಿಲು, ಗಾಳಿ, ಮಳೆ ಆಶ್ರಯಕ್ಕಾಗಿ ಮೇಲೆ ಶೀಟ್​ಗಳನ್ನು ಹಾಕದೆ ಬಿಟ್ಟಿರುವುದನ್ನು ಗಮನಿಸಿದರೆ ಯಾವ ಪುರುಷಾರ್ಥಕ್ಕೆ ನಿರ್ಮಿಸಲಾಗಿದೆ ಎಂಬುದೇ ತಿಳಿಯುತ್ತಿಲ್ಲ.
"

ವಾಣಿಜ್ಯ ಮಳಿಗೆಗಳು ಹೆಚ್ಚಾಗಿರುವುದರಿಂದ ಅಲ್ಲೇ ಬಸ್​ಗಳನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ ಹೊಸ ನಿಲ್ದಾಣವನ್ನು ಬಳಸುತ್ತಿಲ್ಲ. ಇದನ್ನು ರೆಡಿ ಮಾಡಿದರೆ ಬಳಸಬಹುದಾಗಿದೆ.

> ಆರ್​.ಲಕ್ಷಿಪತಿ, ತೊಂಡೆಬಾವಿ

"

ಸ್​ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ರೈಲ್ವೆ ನಿಲ್ದಾಣದ ಮುಂಭಾಗ ನಿಲ್ಲುತ್ತಾರೆ. ಹಾಗಾಗಿ ಬಸ್​ಗಳು ಅಲ್ಲಿಯೇ ನಿಲುಗಡೆ ಮಾಡುತ್ತಿವೆ. ಇದು ಬಸ್​ ನಿಲ್ದಾಣ ಎಂಬುದು ಗೊತ್ತಾಗಬೇಕಿದೆ.

> ಪಿ.ಮಂಜುನಾಥ್​, ತೊಂಡೆಬಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net