ನಗರದ ಶ್ರೀ ಕೆಂಪಮ್ಮ ದೇವಾಲಯದಿಂದ ದೊಡ್ಡಪೇಟೆ ರಸ್ತೆಮಾರ್ಗವಾಗಿ ಬಂದ ಪ್ರತಿಭಟನಾಕಾರರು ಸಿಂಗ್ರಿ ನಂಜಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುಖಂಡರಾದ ಪ್ರೊ.ಜಯಾನಂದಯ್ಯ, ರಾಜಣ್ಣ, ಅಲ್ಲಾಬಕಾಶ್, ಆರ್.ಎಸ್. ಚನ್ನಬಸವಣ್ಣ, ರಾಜಮ್ಮ, ಬಾಬು. ಶಂಕರ್. ಮಲ್ಲಿಕಾರ್ಜುನ್. ತಿಮ್ಮೇಗೌಡ, ತಾಸಿಮ್ ಇತರರು ಇದ್ದರು.