ಕಾಸು ಬಿಡದ ತಿಮ್ಮಪ್ಪ, ಮಾತು ಬಿಡದ ಮಂಜುನಾಥ

ಶಾಸಕ ವಿ. ಸುನೀಲ್ ಕುಮಾರ್
ಶಾಸಕ ವಿ. ಸುನೀಲ್ ಕುಮಾರ್
Published on
ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್‌ಐಟಿಯ ವರದಿಯನ್ನು ಸರ್ಕಾರ ತಕ್ಷಣ ಬಹಿರಂಗ ಮಾಡಬೇಕು ಎಂದು ಶಾಸಕ ವಿ. ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ರಚನೆ ಆಗಿ ಇಷ್ಟು ತಿಂಗಳು ಕಳೆದರೂ ವರದಿಯನ್ನು ಬಹಿರಂಗ ಮಾಡಿಲ್ಲ. ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂದು ಸರ್ಕಾರ ತಿಳಿಸಲಿ ಎಂದು ಒತ್ತಾಯಿಸಿದರು.
ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿನಾಕಾರಣ ಅವಹೇಳ ಮಾಡಲಾಗುತ್ತಿದೆ. ದೊಡ್ಡ ಷಡ್ಯಂತ್ರ ರೂಪಿಸಿದ್ದ ಗ್ಯಾಂಗಿನ ಆರೋಪಿ ಕೋರ್ಟ್‌ಗೆ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಪ್ರಕರಣದ ಬಗ್ಗೆ ವಿಧಾನಸಭೆ ಹಾಗೂ ಪಕ್ಷದ ವತಿಯಿಂದ ಬೇರೆ ಬೇರೆ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದೆವು. ಇದರ ಹಿಂದೆ ಕೇರಳದ ನಂಟಿದೆ, ಬೇರೆ ಬೇರೆ ರಾಜ್ಯದ ನಂಟಿದೆ ಎಂದು ಹೇಳಿದ್ದೆವು ಎಂದು ಹೇಳಿದರು.
ಆರೋಪಿ ಎಸ್‌ಐಟಿ ಮುಂದೆ ಹೇಳಲಾಗದ್ದನ್ನು ನ್ಯಾಯಾಲಯದ ಮುಂದೆ ಹೇಳಿದ್ದಾನೆಂದರೆ ಎಸ್‌ಐಟಿ ಯಾವ ರೀತಿಯ ತನಿಖೆ ಮಾಡಿತ್ತು. ಇದರ ಹಿಂದಿರುವ ಹುನ್ನಾರ ಏನು ? ಎಲ್ಲವೂ ಸಾರ್ವಜನಿಕ ಚರ್ಚೆಗೆ ಬರಬೇಕಾಗಿದೆ ಎಂದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಸು ಬಿಡದ ತಿಮ್ಮಪ್ಪ, ಮಾತು ಬಿಡದ ಮಂಜುನಾಥ ಅಂತ ಉಲ್ಲೇಖಿಸಿ, ತಾನು ಧರ್ಮಸ್ಥಳದ ಪರವಾಗಿ ಇದ್ದೇನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಕೇವಲ ಹೆಸರಿನಲ್ಲಿ ಶಿವ ಅಂತ ಇಟ್ಟುಕೊಂಡರೆ ಆಗಲ್ಲ. ಧರ್ಮಸ್ಥಳದ ಬಗ್ಗೆ ಯಾರು ಅವಹೇಳನ ಮಾಡಿದ್ದಾರೋ ಅವರನ್ನು ಸರ್ಕಾರ ಒದ್ದು ಒಳಗೆ ಹಾಕಬೇಕಿತ್ತು ಎಂದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net