ಚಿಂತಾಮಣಿ: ನಗರದ ರಾಜೀವ್ ಬಡಾವಣೆಯಲ್ಲಿ ಸೋಮವಾರ ಮಧ್ಯರಾತ್ರಿ ಕಳ್ಳರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಾರಕಾಯುಧಗಳೊಂದಿಗೆ ಓಡಾಡಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಪ್ಪಲಿ ಸದ್ದು ಕೇಳಬಾರದು ಎಂದು ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಭಯಗೊಂಡಿದ್ದಾರೆ. ಜತಗೆ ಈ ವೇಳೆ ಕಳ್ಳರು ಬಡಾವಣೆಯ ಕೆಲ ಮನೆಗಳ ಸಿಸಿ ಕ್ಯಾಮರಾ ವಯರ್ ಕತ್ತರಿಸಿದ್ದಾರೆ ಎನ್ನಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಇದೇ ಮಾದರಿಯಲ್ಲಿ ಓಡಾಡಿದ ಕಳ್ಳರು ಬಡಾವಣೆಯ ಎಚ್ಡಿಎಫ್ಸಿ ಬ್ಯಾಂಕ್ ನೌಕರ ಬಾಬುರೆಡ್ಡಿ ಅವರ ಬೈಕ್ ಕಳವು ಮಾಡಿದ್ದರು.