ಕೆಲಸ ಕೊಟ್ಟ ಮಾಲೀಕನಿಗೆ ಪಂಗನಾಮ ಹಾಕಿದ ನೇಪಾಳ ದಂಪತಿ; ಚಿನ್ನಾಭರಣ, ನಗದು ದೋಚಿ ಪರಾರಿ..Bengaluru

They were given jobs, but allegedly robbed the same house: Nepal-origin couple under scanner
They were given jobs, but allegedly robbed the same house: Nepal-origin couple under scanner
Published on

ಪ್ರಮುಖ ಮುಖ್ಯಾಂಶಗಳು

  • ಕೆಲಸ ಕೊಟ್ಟು ಸಲುಹಿದ ಮಾಲೀಕರ ಮನೆಯಲ್ಲಿಯೇ ಕಳ್ಳತನ ಮಾಡಿದ ದಂಪತಿ.
  • ಆಗಸ್ಟ್​5ರಂದು ಮನೆಯಲ್ಲಿ ಯಾರು ಇಲ್ಲ ಎನ್ನುವುದನ್ನು ಅರಿತು ಕಳ್ಳತನ.
  • ಕೆಲಸ ಕೇಳುವ ನೆಪದಲ್ಲಿ ಕಳ್ಳತನ, ಆರೋಪಿಗಳಿಗಾಗಿ ಹುಡುಕಾಟ.

ನವದೆಹಲಿ: ಕೆಲಸ ಕೊಟ್ಟಿದ್ದ ಮಾಲೀಕರ ಮನೆಯಲ್ಲಿಯೇ ನೇಪಾಳ ಮೂಲದ ದಂಪತಿ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.

ಗಸ್ಟ್​5ರಂದು ಮನೆಯಲ್ಲಿ ಯಾರು ಇಲ್ಲ ಎನ್ನುವುದನ್ನು ಅರಿತ ದಂಪತಿ ರಾತ್ರೋರಾತ್ರಿ ಯಾರು ಇಲ್ಲದ್ದನ್ನು ಗಮನಿಸಿಕೊಂಡು, ರಾಡ್​ ಹಿಡಿದು ಮನೆಯಲ್ಲಿದ್ದ ಅತಿ ಅಮೂಲ್ಯ ವಸ್ತುಗಳಾದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿ, ರಾತ್ರೋರಾತ್ರಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪರಿಚಯವಾಗಿದ್ದು ಹೇಗೆ?

ಹೋಸಕೋಟೆಯ ಹೊರವಲಯದ ಹೆದ್ದಾರಿ ಬದಿಯ 40 ಎಕರೆ ಪ್ರದೇಶದಲ್ಲಿರುವ ಪಾಲಮ್​ ವಿಲ್ಲಾ ಬಡಾವಣೆಲ್ಲಿ ಸಂತ್ರಸ್ತ ಮಾಲೀಕ ರವಿ ರಾಜನ್​ ಎನ್ನುವರು ಹಲವಾರು ವರ್ಷಗಳಿಂದ ತಮ್ಮ ಕುಟುಂಬ ಸಮೇತ ವಾಸವಾಗಿತ್ತು.

ಕೆಲಸಕೊಟ್ಟ ಮಾಲೀಕನ ಮನೆಗೆ ಕನ್ನ

ಇತ್ತೀಚೆಗೆ ಅದೇ ಬಡಾವಣೆಯ ಸೆಕ್ಯೂರಿಟಿ ಗಾರ್ಡ್​ ಆಗಿ ನೇಮಕಗೊಂಡಿದ್ದ ನೇಪಾಳದ ವ್ಯಕ್ತಿ. ಹೀಗೊಮ್ಮೆ ತಮ್ಮ ಹೆಂಡತಿಗೂ ಕೆಲಸ ಕೊಡಬೇಕು ಎಂದು ಬೇಡಿಕೆ ಇಟ್ಟರು. ಹೆಂಡತಿ ಕಾರು, ಮನೆ ಕ್ಲೀನ್ ಮಾಡಿಕೊಳ್ಳುತ್ತಾಳೆ ಎಂದು ಮಾಲೀಕನ ಮನವೊಲಿಸಿದ್ದ,

ಆಗಸ್ಟ್ 5ರಂದು ಪರಾರಿ

ನೇಪಾಳ ಮೂಲದ ಸೆಕ್ಯೂರಿಟಿಗಾರ್ಡ್​ ಹೇಳಿದಂತೆ ಅವರು ಕೆಲಸ ಕೊಟ್ಟಿದ್ದರು. ನಾವು ಊರಲ್ಲಿರುವುದಿಲ್ಲ ಮನೆ ಕಡೆ ಜೋಪಾನ ಎಂದು ಮಾಲೀಕ ಹೊರಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಆಗಸ್ಟ್ 5ರಂದು ರಾತ್ರೋರಾತ್ರಿ ಹಣ, ಚಿನ್ನ ಕದ್ದು ಪರಾರಿಯಾಗಿದ್ದಾರೆ.

ಮುಂದುವರೆದ ತನಿಖೆ

ಇತ್ತ ಕಾರ್ಯಕ್ರಮ ಮುಗಿಸಿ ಊರಿನಿಂದ ವಾಪಸ್ ಬಂದ ರವಿ ರಾಜನ್​ ಅವರಿಗೆ ಸೆಕ್ಯೂರಿಟಿ ಗಾರ್ಡ್​ ನಾಪತ್ತೆಯಾಗಿದ್ದು, ಅಮೂಲ್ಯ ವಸ್ತು ಪರಿಶೀಲನೆ ಮಾಡಿಕೊಳ್ಳಿ ಎಂಬ ಬಗ್ಗೆ ನೆರೆಹೊರೆಯವರು ಮಾಹಿತಿ ನೀಡಿದ್ದರು. ತಕ್ಷಣ ಮನೆಗೆ ಬಂದು ಸಿಸಿಟಿವಿ ಹಾಗೂ ಲಾಕರ್​ಗಳನ್ನು ಪರಿಶೀಲನೆ ಮಾಡಿದ ಅವರಿಗೆ ಕಳ್ಳತನಾಗಿರುವ ಬಗ್ಗೆ ಖಚಿತವಾಯ್ತು..
ಸದ್ಯ ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಚಿನ್ನಾಭರಣ ಕದ್ದೊಯ್ದ ಖದೀಮರಿಗಾಗಿ ಬಲೆ ಬೀಸಿದ್ದಾರೆ. ತಾಂತ್ರಿಕವಾಗಿ, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತನಿಖೆ ಮುಂದುವರೆದಿದೆ ಎನ್ನಲಾಗಿದೆ,.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net