ಆಸ್ತಿಗಾಗಿ ಚಿಕ್ಕಮ್ಮನನ್ನೇ ಕೊಂದು ಸುಟ್ಟರು!

They killed and burned their aunt for property!
They killed and burned their aunt for property!
Published on
ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.
ಆಸ್ತಿ ಲಪಟಾಯಿಸಲು ಪ್ರಿಯಕರನೊಂದಿಗೆ ಸೇರಿಕೊಂಡು ಚಿಕ್ಕಮ್ಮಳನ್ನು ಯುವತಿಯು ಕೊಲೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
"

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಪ್ರದೇಶದಲ್ಲಿ ಮೃತದೇಹ ಪತ್ತೆಯಾದ ಪ್ರಕರಣದಲ್ಲಿ ಮೃತಳು ನೊಣಕಮ್ಮ ಎನ್ನುವುದು ದೃಢಪಟ್ಟಿದೆ. ಈಕೆಯನ್ನು ಕೊಲೆ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ.> ಕುಶಾಲ್​ ಚೌಕ್ಸೆ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ಪ್ರಕರಣದ ಹಿನ್ನೆಲೆ: ಕಳೆದ ಸೆಪ್ಟೆಂಬರ್​ನಲ್ಲಿ ನಂದಿ ಗಿರಿಧಾಮದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಬುರುಡೆ, ದೇಹದ ಮೂಳೆಗಳು ಪತ್ತೆಯಾಗಿದ್ದವು. ಈ ಬಗ್ಗೆ ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಥಳದಲ್ಲಿ ಸುಟ್ಟುಕರಕಲಾದ ಸೀರೆ, ಮೂಗುತಿ ಸಿಕ್ಕಿತ್ತು. ಇದರ ಆಧಾರದ ಮೇಲೆ ನಾಪತ್ತೆ ಮಹಿಳೆಯರ ಪ್ರಕರಣಗಳನ್ನು ಬೆನ್ನತ್ತಿದಾಗ ತಿಪ್ಪರಾಯನದುರ್ಗದ ನೊಣಕಮ್ಮಳದ್ದೇ ಮೃತದೇಹ ಎನ್ನುವುದು ತಿಳಿದು ಬಂದಿದೆ. ಈಕೆ ಗಂಡನು ತೀರಿಕೊಂಡ ಬಳಿಕ ತವರು ಮನೆಗೆ ಬಂದು, ಅಣ್ಣನ ಕುಟುಂಬದೊಂದಿಗೆ ನೆಲೆಸಿದ್ದಳು.
"

ಚಿಕಿತ್ಸೆ ನೆಪದಲ್ಲಿ ಕೊಲೆ

ನಾಗಲ್ಮ, ಅಶೋಕ್​ ಇಬ್ಬರೂ ಕೊಲೆ, ರಾಬರಿ ಅಪರಾಧ ಹಿನ್ನೆಲೆಯುಳ್ಳವರು. ಇದರ ನಡುವೆ ಚಿಕ್ಕಮ್ಮ ನೊಣಕಮ್ಮಳ ಚೀಟಿ ಹಣ, ಒಡವೆಗಳ ಮೇಲೆ ನಾಗಲ್ಮ ಕಣ್ಣಿಟ್ಟಿದ್ದು, ಲಪಟಾಯಿಸಲು ಯತ್ನಿಸುತ್ತಿದ್ದಳು. ನೊಣಕಮ್ಮಗೆ ಮೂರ್ಛೆ ರೋಗ ಇರುವುದನ್ನು ನಾಗಲ್ಮ ದುರುಪಯೋಗ ಪಡಿಸಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ದ್ವಿಚಕ್ರ ವಾಹನದಲ್ಲಿ ವೃದ್ಧೆಯನ್ನು ನಾಗಲ್ಮ ಕರೆದುಕೊಂಡು ಬಂದಿದ್ದಾಳೆ. ಕೊನೆಗೆ ಪ್ರಿಯಕರನೊಂದಿಗೆ ಸೇರಿಕೊಂಡು ಅರಣ್ಯ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಹಾಗೆಯೇ ಮಾರನೇ ದಿನ ಬಂದು ಮೃತದೇಹದ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದರು. ಬಳಿಕ ಏನೂ ಆಗಿಲ್ಲ ಎನ್ನುವಂತೆ ನಾಗಲ್ಮ ಊರಿನಲ್ಲಿ ಸುಮ್ಮನಿದ್ದು ಕುಟುಂಬಸ್ಥರು ವೃದ್ಧೆಯನ್ನು ಹುಡುಕಾಡಿದ ಬಳಿಕ ಸ್ಥಳಿಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ನಂದಿ ಭಾಗದಲ್ಲಿ ಪತ್ತೆಯಾದ ಮೃತದೇಹವು ನೊಣಕಮ್ಮ ಎನ್ನುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ಅನುಮಾನದ ಮೇಲೆ ನಾಗಲ್ಮಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸತ್ಯಾಂಶವು ಹೊರ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net