ಕರೋನಾ ಸಂದರ್ಭದಲ್ಲಿ ಮೋದಿ ಬದಲು ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದೇ ಆದರೆ ದೇಶ ಸ್ಮಶಾನವಾಗಿರುತ್ತಿತ್ತು. ಸಕಾಲಕ್ಕೆ ಆಮ್ಲಜನಕ, ಲಸಿಕೆ ಒದಗಿಸಿದರು. ಇಡೀ ದೇಶದ ಜನ ಮೋದಿಗೆ ಬೆಂಬಲವಾಗಿ ನಿಂತರು. ಕರೋನಾ ವಾರಿಯರ್ಸ್‌ಗಳಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಹೀಗೆ ಸಂಕಷ್ಟದ ಸ್ಥಿತಿಯಲ್ಲಿ ಪ್ರಧಾನಿ ಮೋದಿ ಬೆನ್ನಿಗೆ ದೇಶದ ಜನ ನಿಲುತ್ತಿರುವುದನ್ನು ಸಹಿಸಲಾಗದ ಕಾಂಗ್ರೆಸ್ಸಿಗರು ಹೊಟ್ಟೆಕಿಚ್ಚಿನಿಂದ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಚಪ್ಪಾಳೆ ತಟ್ಟಿ, ಗಂಟೆ ಭಾರಿಸಿ ಎಂದಿದ್ದು ಕರೋನಾ ವಾರಿಯರ್ಸ್‌ಗೆ ಅಭಿನಂದಿಸುವುದಕ್ಕೋಸ್ಕರವೇ ವಿನಃ ಅಸಹಾಯಕತೆಯಿಂದಲ್ಲ. ಹಾಗೆ ಅಸಹಾಯಕತೆಯಿಂದ ಜನರಿಂದ ಚಿನ್ನದ ತುಲಾಭಾರ ನೆರವೇರಿಸಿಕೊಳ್ಳಲು, ರಕ್ಷಣಾ ನಿಧಿ ಸಂಗ್ರಹಿಸಲು ಇಂದು ದೇಶದಲ್ಲಿ ಅಸಮರ್ಥ ಕಾಂಗ್ರೆಸ್ ಆಡಳಿತಾವಧಿಯಿಲ್ಲ. ಸಬ್ ಕಾ ಸಾಥ್, ಸಬ್‌ಕಾ ವಿಕಾಸ, ಮೇಕ್ ಇನ್ ಇಂಡಿಯಾ ಹೆಸರಲ್ಲಿ ಸದೃಢ ಭಾರತ ನಿರ್ಮಿಸಲು ಕಂಕಣಬದ್ಧರಾಗಿರುವ ಸದೃಢ ನಾಯಕ ನರೇಂದ್ರ ಮೋದಿ ಆಡಳಿತ ಎಂಬುದು ನೆನಪಿರಲಿ ಎಂದು ಅವರು ಪ್ರಕಟಣೆ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.