ಪರಿಷ್ಕರಣೆ ನೆಪದಲ್ಲಿ ಕಾಂಗ್ರೆಸ್ ಪರವಿರುವವರನ್ನು ಕೈ ಬಿಡುವ ಹುನ್ನಾರ
ಮುಧೋಳ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಅಶೋಕ ಕಿವಡಿ, ಮಹಾಂತೇಶ ಮಾಚಕನೂರ, ಸದುಗೌಡ ಪಾಟೀಲ್, ಮುದಕಣ್ಣ ಅಂಬಿಗೇರ, ರಘು ಮೊಕಾಶಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆರ್‌ಎಸ್‌ಎಸ್ ವಿರುದ್ಧ ವಕೀಲ ಎನ್.ಬಿ. ಗಸ್ತಿ ಆರೋಪ
ಬಿಜೆಪಿಯಿಂದ ಕುತಂತ್ರ ರಾಜಕಾರಣ
ಮುಧೋಳ: ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಆರ್‌ಎಸ್‌ಎಸ್ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ನೆಪದಲ್ಲಿ, ವೈಜ್ಞಾನಿಕವಾಗಿ ಕಾಂಗ್ರೆಸ್ ಪರ ಮತದಾರರನ್ನು ಮತಪಟ್ಟಿಯಿಂದ ಕೈಬಿಡುವ ಸಂವಿಧಾನ ವಿರೋಧಿ ಹುನ್ನಾರ ನಡೆಸುತ್ತಿವೆ ಎಂದು ಎಸ್‌ಐಆರ್ ತರಬೇತಿದಾರ ಹಾಗೂ ಕಾನೂನು ಘಟಕದ ಮಾನವ ಹಕ್ಕುಗಳ ವಕೀಲ ಎನ್.ಬಿ. ಗಸ್ತಿ ಆತಂಕ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ದೇಶದ ಸ್ವಂತ ನಾಗರಿಕರನ್ನು ಒಳ ನುಸುಳುಕೋರರೆಂದು ಬಿಂಬಿಸಿ ಮತಪಟ್ಟಿಯಿಂದ ಕೈಬಿಡಲಾಗುತ್ತಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಲಾಗಿದೆ ಎಂದು ಎಚ್ಚರಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಸರ್ಕಾರಿ ಸೌಲಭ್ಯಗಳೂ ಸಿಗುವುದಿಲ್ಲ, ಈ ನಿಟ್ಟಿನಲ್ಲಿ ಮತದಾರರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ವಕ್ತಾರ ಶೈಲಜಾ ಹಿರೇಮಠ ಮಾತನಾಡಿ, ಮತಪಟ್ಟಿ ಪರಿಷ್ಕರಣೆ ನೆಪದಲ್ಲಿ ದೇಶಾದ್ಯಂತ ಲಕ್ಷಾಂತರ ಮತದಾರರನ್ನು ಕೈಬಿಡಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಹಾಗೂ ಬಿಹಾರ ರಾಜ್ಯಗಳಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಅಂಕಿ-ಅಂಶಗಳೇ ಇದಕ್ಕೆ ಸಾಕ್ಷಿ ಎಂದರು.
ಜತೆಗೆ, ಮತದಾರರ ನೋಂದಣಿಗೆ ಅಗತ್ಯವಿರುವ 11 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮಹಾಂತೇಶ ಮಾಚಕನೂರ, ಸದುಗೌಡ ಪಾಟೀಲ್, ಮುದಕಣ್ಣ ಅಂಬಿಗೇರ, ರಘು ಮೊಕಾಶಿ ಸೇರಿ ಬೂತ್‌ಮಟ್ಟದ ಅಧ್ಯಕ್ಷರು ಮತ್ತು ಬಿಎಲ್‌ಎಗಳು ಉಪಸ್ಥಿತರಿದ್ದರು.
"
ಅಭಿವೃದ್ಧಿ ಶೂನ್ಯವಾಗಿರುವ ಬಿಜೆಪಿ, ಅಭಿವೃದ್ಧಿ ಬಗ್ಗೆ ಚಕಾರವೆತ್ತದೆ ಆರ್‌ಎಸ್‌ಎಸ್ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯತ್ನ ನಡೆಯುತ್ತಿದೆ. ಬೂತ್ ಮಟ್ಟದ ಅಧ್ಯಕ್ಷರು ಮತ್ತು ಬಿಎಲ್‌ಎ-2 ಕಾರ್ಯಕರ್ತರು ಜಾಗರೂಕರಾಗಿ ಕೆಲಸ ಮಾಡಿ, ಕಾಂಗ್ರೆಸ್ ಭದ್ರಕೋಟೆಯನ್ನು ಗಟ್ಟಿಗೊಳಿಸಬೇಕು.