ಕೆಎಸ್‌ಡಿಎಲ್‌ನಲ್ಲಿ ಭ್ರಷ್ಟಾಚಾರ ನಡೆದಿಲ್ಲ; ಶಾಸಕ ಎಚ್.ಟಿ.ಮಂಜು ಆರೋಪಕ್ಕೆ ಕೆಎಸ್‌ಡಿಎಲ್ ಎಂ.ಡಿ. ಸ್ಪಷ್ಟನೆ

ಕೆಎಸ್​ಡಿಎಲ್
ಕೆಎಸ್​ಡಿಎಲ್
Published on

ಪ್ರಮುಖ ಮುಖ್ಯಾಂಶಗಳು

  • ಕಚ್ಚಾ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ
  • ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಆರೋಪ
  • ಕೆಎಸ್‌ಡಿಎಲ್ ಎಂ.ಡಿ. ನಿರಾಕರಣೆ

ಬೆಂಗಳೂರು:ಕರ್ನಾಟಕ ಸೋಪ್ಸ್ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್(ಕೆಎಸ್‌ಡಿಎಲ್)ನಲ್ಲಿ ಕಚ್ಚಾಸಾಮಾಗ್ರಿಗಳ ಖರೀದಿಯಲ್ಲಿಭ್ರಷ್ಟಾಚಾರ ನಡೆದಿದೆ ಎಂಬಕೆ.ಆರ್.ಪೇಟೆಶಾಸಕ ಎಚ್.ಟಿ.ಮಂಜುಆರೋಪವನ್ನು ಕೆಎಸ್‌ಡಿಎಲ್ ಎಂ.ಡಿ.ನಿರಾಕರಿಸಿದ್ದಾರೆ.

ಪತ್ರಿಕಾಹೇಳಿಕೆಯಲ್ಲಿ ಸುದೀರ್ಘ ವಿವರಣೆನೀಡಿರುವ ಕೆಎಸ್‌ಡಿಎಲ್ ಎಂಡಿಡಾ.ಪ್ರಶಾಂತ್ಪಿ.ಕೆ.ಎಂ,ಕೆಎಸ್‌ಡಿಎಲ್ಸಂಸ್ಥೆಯ ಕಚ್ಚಾ ಸಾಮಾಗ್ರಿಗಳಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರನಡೆದಿರುವುದಿಲ್ಲ.ಕೆ.ಆರ್.ಪೇಟೆಯ ಶಾಸಕಹಾಗೂ ವಿಧಾನ ಮಂಡಲದ ಕಾಗದ ಪತ್ರಸಮಿತಿ ಸದಸ್ಯರಾದ ಎಚ್.ಟಿಮಂಜು ರವರು ಮಾಡಿರುವ ಆರೋಪಗಳುನಿರಾಧಾರವಾಗಿದ್ದು,ಯಾವುದೇಸತ್ಯಾಂಶಗಳನ್ನು ಒಳಗೊಂಡಿರುವುದಿಲ್ಲ.ಈ ರೀತಿ ನಿರಾಧಾರವಾಗಿಸರ್ಕಾರಿ ಸ್ವಾಮ್ಯದ ಹಸರಾಂತಸಂಸ್ಥೆಯ ಬಗ್ಗೆ,ಆರೋಪ ಮಾಡುವುದುಸರಿಯಲ್ಲ. ಈಸಂಬಂಧ ಶಾಸಕರು ಮತ್ತು ಸರ್ಕಾರಕ್ಕೆಈಗಾಗಲೇ ಸುಮಾರು 1500ಪುಟಗಳುಳ್ಳ 263ಕಡತಗಳ ಮಾಹಿತಿಯನ್ನುಒದಗಿಸಲಾಗಿದೆ.ಇನ್ನೂ ಹೆಚ್ಚಿನಮಾಹಿತಿ ಬೇಕಾಗಿದ್ದಲ್ಲಿ ವಿವರವಾದಮಾಹಿತಿಯನ್ನು ನೀಡಲು ಸಂಸ್ಥೆಯುಸಿದ್ಧವಿದೆ ಎಂದು ತಿಳಿಸಿದ್ದಾರೆ.

ಈಹಿಂದೆ 2023 ಮಾ.23ರಲ್ಲಿ ಲೋಕಾಯುಕ್ತದಾಳಿಯಲ್ಲಿ ಕರ್ನಾಟಕ ಆರೋಮಾಸ್ಸಂಸ್ಥೆಯ ಹೆಸರು ಉಲ್ಲೇಖವಾಗಿದ್ದು,2025 ರಲ್ಲಿ ಸದರಿಪ್ರಕರಣವನ್ನು ವಜಾಗೊಳಿಸಿಮೆ.ಕರ್ನಾಟಕಆರೋಮಾಸ್ ಸಂಸ್ಥೆಯು ದೋಷಮುಕ್ತವೆಂದುತೀರ್ಪು ನೀಡಿದ್ದು,ಯಾವುದೇ ಕಪ್ಪುಪಟ್ಟಿಗೆಸೇರಿರುವುದಿಲ್ಲ. ಆದ್ದರಿಂದಕೆಟಿಪಿಪಿ ನಿಯಮಾವಳಿಗಳ ಪ್ರಕಾರಪಾರದರ್ಶಕವಾಗಿ ಅವರಿಗೆ ಟೆಂಡರ್ನೀಡಲಾಗಿದೆ.

ಸಂಸ್ಥೆಯಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನುಪಾರದರ್ಶಕವಾಗಿ ನಡೆಸುತ್ತಿದ್ದರೂ,ಕೆಲವು ಬಿಡ್ದಾರರು ನ್ಯಾಯಾಲಯದ ಮೊರೆ ಹೋದಾಗ,ಕೆಎಸ್‌ಡಿಎಲ್ಸಂಸ್ಥೆಯು ಪಾರದರ್ಶಕವಾಗಿ ಮಾಡಿದಟೆಂಡರ್ ನಡಾವಳಿಯನ್ನು ಮಾನ್ಯಉಚ್ಚನ್ಯಾಯಾಲಯವು ತನ್ನ ಆದೇಶದಲ್ಲಿಎತ್ತಿ ಹಿಡಿದಿರುತ್ತದೆ.ಹೀಗಾಗಿ ಕೆಎಸ್‌ಡಿಎಲ್ಸಂಸ್ಥೆಯು ಯಾವುದೇ ಭ್ರಷ್ಟಾಚಾರಕ್ಕೆಅವಕಾಶ ಕೊಡದೆ ಪ್ರಾಮಾಣಿಕವಾಗಿಹಾಗೂ ಪಾರದರ್ಶಕವಾಗಿ ಟೆಂಡರ್ಪ್ರಕ್ರಿಯೆ ನಡೆಸುತಲಿದ್ದು,ಶಾಸಕರಾದ ಎಚ್.ಟಿಮಂಜುರವರಿ ಮಾಡಿರುವ ಆರೋಪಗಳುನಿರಾಧಾರವಾಗಿದ್ದು,ಮಾಹಿತಿ ಕೊರತೆಯಿಂದಕೂಡಿರುವುದು ಕಂಡು ಬಂದಿರುತ್ತದೆ.ಇದು ಸಂಸ್ಥೆಯಪ್ರತಿಷ್ಠತೆಗೆ ಧಕ್ಕೆ ತರುವಂತಾಗಿದ್ದು,ಇವರುಗಳ ಎಲ್ಲಾಆರೋಪಗಳನ್ನು ಕೆಎಸ್‌ಡಿಎಲ್ಸಂಸ್ಥೆ ನಿರಾಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net