ಕಲಬುರಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಗ್ರಾಮೀಣ ಭಾಗದ 28 ಹಳ್ಳಿಗಳಲ್ಲಿ ನೀರಿನ ತೊಂದರೆ ಇದೆ. ನಗರದ ಹಲವು ವಾರ್ಡ್ಗಳಲ್ಲೂ ಸಮಸ್ಯೆ ಉಲ್ಬಣಿಸಿದೆ. ಜನ ಟ್ಯಾಂಕರ್ ಮೊರೆ ಹೋಗಿದ್ದಾರೆ. ನಗರದಲ್ಲಿ ಶೇ.60ರಷ್ಟು ಕೊಳವೆ ಬಾವಿ ಬತ್ತಿವೆ. ಇವನ್ನೆಲ್ಲ ಗಮನಿಸಿ ಜನ, ಜಾನುವಾರುಗಳಿಗೆ ಸಮಸ್ಯೆ ಕಾಡದಂತೆ ಕೆಲಸ ಮಾಡಬೇಕು ಎಂದು ಹೇಳಿದರು.