

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಇತ್ತೀಚಿನದಿನಗಳಲ್ಲಿ ವಿವಿಧ ರಾಜ್ಯಗಳಜಂಟಿ ಅಧಿವೇಶನಗಳಲ್ಲಿ ರಾಜ್ಯಪಾಲರನೀತಿ ಭಾಷಣ ಸಂವಿಧಾನದ ಪ್ರಕಾರ ಸರ್ಕಾರದ ಮುಂದಿನ ಒಂದು ವರ್ಷದನೀತಿಯನ್ನು ಬಿಂಬಿಸುವ ಬದಲುಕೇಂದ್ರ ಸರ್ಕಾರವನ್ನು ಟೀಕಿಸಲುವೇದಿಕೆಯನ್ನಾಗಿ ಮಾಡಿಕೊಳ್ಳಲಾಗುತ್ತಿದೆ.ಶಾಸಕಾಂಗದವೇದಿಕೆಯು ರಾಜಕೀಯ ಟೀಕೆಗೆಬಳಕೆಯಾಗಬಾರದು ಎಂದು ಕೇರಳಂರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಹೇಳಿದರು.
ಶನಿವಾರ ರಾಜ್ಯ ಸರ್ಕಾರಿ ನೌಕರರ ಸಂಘದಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತಐಎಎಸ್ ಅಧಿಕಾರಿ ಟಿ.ಎನ್.ಧ್ರುವಕುಮಾರ್ಅವರ ಸಂಸದೀಯ ಹಕ್ಕು ಬಾಧ್ಯತೆಗಳಒಂದು ನೋಟ-ಗ್ಲಿಂಪ್ಸಸ್ಆಫ್ ಪಾರ್ಲಿಮೆಂಟರಿ ಪ್ರಿವಿಲೇಜಸ್ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು,
ಸಂಸದೀಯನಡಾವಳಿಗಳು ಮತ್ತು ಹಕ್ಕುಬಾಧ್ಯತೆಗಳು ಕೇವಲ ಸಂಘರ್ಷ ಮಾಡಲುಅಲ್ಲ, ಬದಲಿಗೆಅವು ಸೌಹಾರ್ದತೆ ಮತ್ತು ಸಹಕಾರದಮೂಲಕ ದೇಶದ ಅಭಿವೃದ್ಧಿಗೆಪೂರಕವಾಗಿರಬೇಕು.ಪ್ರಜಾಪ್ರಭುತ್ವವ್ಯವಸ್ಥೆಯಲ್ಲಿ ಓದು ಮತ್ತು ಬರಹಗೊತ್ತಿಲ್ಲದವರೂ ಜನಪ್ರತಿನಿಧಿಗಳಾಗಿಆಯ್ಕೆಯಾಗುತ್ತಿದ್ದಾರೆ.ಕನಿಷ್ಠ ಕಾರುಚಾಲನೆ ಮಾಡಲು ಅಥವಾ ಕಚೇರಿಯೊಂದರಲ್ಲಿಅಟೆಂಡರ್ ಹುದ್ದೆಗೆ ಸೇರಲುವಿದ್ಯಾರ್ಹತೆ ಮತ್ತು ಪ್ರಮಾಣಪತ್ರಗಳನ್ನು ಪರಿಶೀಲಿಸಲಾಗುತ್ತದೆ.ಆದರೆ,ಇಡೀ ದೇಶದಭವಿಷ್ಯವನ್ನು ಐದು ವರ್ಷಗಳ ಕಾಲಕೈಯಲ್ಲಿ ಹಿಡಿಯುವ ಜನಪ್ರತಿನಿಧಿಗಳವಿದ್ಯಾರ್ಹತೆಯ ಬಗ್ಗೆ ನಾವೇಕೆಯೋಚಿಸುತ್ತಿಲ್ಲ ಎಂಬ ಬಗ್ಗೆಜನರು ತಾವೇ ಪ್ರಶ್ನೆ ಮಾಡಿಕೊಳ್ಳಬೇಕುಎಂದು ಅರ್ಲೇಕರ್ ಹೇಳಿದರು.
ಕಾರ್ಯಕ್ರಮದಲ್ಲಿಹಿರಿಯ ಪತ್ರಕರ್ತ ರವಿ ಹೆಗಡೆ,ಹಿರಿಯ ವಕೀಲರಾದಕೆ.ವಿ.ಧನಂಜಯ್,ಪ್ರಮೀಳಾನೇಸರ್ಗಿ,ನರಸಿಂಹಮೂರ್ತಿಸ್ವಾಮೀಜಿ, ವಿಧಾನಪರಿಷತ್ ಮಾಜಿ ಸಭಾಪತಿ ಸುದರ್ಶನ್,ಎಫ್‌ಕೆಸಿಸಿಐಮಾಜಿ ಆಧ್ಯಕ್ಷ ಶ್ರೀನಿವಾಸಮೂರ್ತಿಉಪಸ್ಥಿತರಿದ್ದರು.